Contact Mobile: 91 77603 97878, Land: 08256-295611/ 615/616

Medical Camps

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಮಾ. 07 ಮತ್ತು 08 ರಂದು ಉಚಿತ ಆರೋಗ್ಯ ತಪಾಸಣೆ ಹಾಗೂ ಮಹಿಳಾ ಸ್ವಾಸ್ಥ್ಯ ಸಂರಕ್ಷಣಾ ಶಿಬಿರಕ್ಕೆ ಪರಮಪೂಜ್ಯ ಡಾI ಡಿ. ವೀರೇಂದ್ರ ಹೆಗ್ಗಡೆಯವರಿಂದ ಚಾಲನೆ

ಆರೋಗ್ಯ ವಿಮೆ ಬಗ್ಗೆ ನಿರ್ಲಕ್ಷ್ಯ ಬೇಡ. ಆಪತ್ಕಾಲಕ್ಕೆ ಆರೋಗ್ಯ ವಿಮೆ ಉಪಯೋಗಕ್ಕೆ ಬರುತ್ತದೆ. ಗ್ರಾಮೀಣ ಜನತೆ ರೋಗ ಬಂದಾಗ ನಿರ್ಲಕ್ಷ ಮಾಡಿ, ರೋಗ ಉಲ್ಬಣವಾದಾಗ ಆಸ್ಪತ್ರೆಗಳಿಗೆ ಹೋಗುತ್ತಾರೆ. ರೋಗ ಕಂಡುಬಂದ ತಕ್ಷಣ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆದರೆ ಕಡಿಮೆ ಖರ್ಚಿನೊಂದಿಗೆ ಬೇಗ ಗುಣಮುಖರಾಗಬಹುದು.ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ವರ್ಷಕ್ಕೆ 2ರಿಂದ 3ಕೋಟಿ ರೂಪಾಯಿ ಮೌಲ್ಯದ ಔಷಧ ದಾನ ಮಾಡಲಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾI ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಮಾ.7 ರಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ- ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಮಂಗಳೂರು ರೋಟರಿ ಕ್ಲಬ್ ಹಾಗೂ ಮಂಗಳೂರಿನ ಯೆನೆಪೋಯ ವೈದ್ಯಕೀಯ ಕಾಲೇಜು ಸಹಯೋಗದಲ್ಲಿ 2 ದಿನಗಳ ಉಚಿತ ಆರೋಗ್ಯ ತಪಾಸಣೆ ಹಾಗೂ ಮಹಿಳಾ ಸ್ವಾಸ್ಥ್ಯ ಸಂರಕ್ಷಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
“ಆರೋಗ್ಯ ವಿಮೆ ಬಗ್ಗೆ ಯಾರು ಉದಾಸೀನ ತೋರಬಾರದು. ಆಪತ್ಕಾಲಕ್ಕೆ ಇದು ಸೂಕ್ತ ನೆರವು ನೀಡುತ್ತದೆ. ಇತ್ತೀಚಿನ ವರ್ಷಗಳಲ್ಲಿ ಸರಕಾರವು ಆರೋಗ್ಯ ವಿಚಾರದಲ್ಲಿ ಜನಸಾಮಾನ್ಯರಿಗೆ ಹೆಚ್ಚಿನ ಸಹಕಾರ ನೀಡುತ್ತಿದೆ. ಗ್ರಾಮೀಣ ಜನರು ಕಾಯಿಲೆ ಬಂದಾಗ ತಡವಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಬರುವುದರಿಂದ ರೋಗ ಪತ್ತೆ ತಡವಾಗುತ್ತದೆ .ರೋಗ ಲಕ್ಷಣ ಕಂಡುಬಂದ ತಕ್ಷಣ ಆಸ್ಪತ್ರೆ ಗಳಿಗೆ ತೆರಳಿದರೆ ಕಡಿಮೆ ಖರ್ಚಿನ ಜತೆ ರೋಗ ಬೇಗನೆ ಶಮನಗೊಳ್ಳಲು ಸಾಧ್ಯ,” ಎಂದರು.
ಯೆನಪೋಯ ವೈದ್ಯಕೀಯ ಕಾಲೇಜಿನ ಉಪಕುಲಪತಿ ಡಾ.ವಿಜಯಕುಮಾರ್ ಮಾತನಾಡಿ, “ಕ್ಯಾನ್ಸರ್ನಂತಹ ರೋಗಗಳು ಮೊದಲ ಹಂತದಲ್ಲಿ ಪತ್ತೆಯಾದರೆ ಸಂಪೂರ್ಣ ಗುಣಪಡಿಸಲು ಸಾಧ್ಯ. ಆದರೆ ಹೆಚ್ಚಿನವರು ಕೊನೆ ಹಂತ ತಲುಪಿದ ಬಳಿಕ ವೈದ್ಯರನ್ನು ಸಂಪರ್ಕಿಸುವ ಕಾರಣ ಶೇ.12 ರಷ್ಟು ರೋಗಿಗಳನ್ನು ಮಾತ್ರ ಗುಣಪಡಿಸಲು ಸಾಧ್ಯವಾಗುತ್ತದೆ. ಆದಾಯ ಮಿತಿಗೆ ಒಳ ಪಟ್ಟು ಕ್ಯಾನ್ಸರ್ ರೋಗಿಗಳಿಗೆ 2ರಿಂದ 5 ಲಕ್ಷ ರೂ. ಸಹಾಯಧನ ಸರಕಾರದ ನಾನಾ ಯೋಜನೆಗಳಿಂದ ಸಿಗುತ್ತದೆ,” ಎಂದರು.
ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮಂಗಳೂರಿನ ಯೆನೆಪೋಯ ವೈದ್ಯಕೀಯ ಆಸ್ಪತ್ರೆಗಳ ನಡುವೆ ಎಂ.ಒ.ಯು ಒಡಂಬಡಿಕೆ ಒಪ್ಪಂದದ ಹಸ್ತಾಂತರ ನಡೆಯಿತು.
ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಮಾತನಾಡಿ, ಉಜಿರೆ ಎಸ್.ಡಿ. ಎಂ ಆಸ್ಪತ್ರೆ ನಗರದ ಆಸ್ಪತ್ರೆಯಲ್ಲಿ ಸಿಗುವ ವೈದ್ಯಕೀಯ ಸೌಲಭ್ಯಗಳನ್ನು ಗ್ರಾಮಾಂತರ ಪ್ರದೇಶದಲ್ಲಿ ಅತೀ ಕಡಿಮೆ ಖರ್ಚಿನಲ್ಲಿ ಒದಗಿಸುತ್ತಿದೆ ಎಂದರು

ಆಸ್ಪತ್ರೆಯ ನಿರ್ದೇಶಕ ಎಂ. ಜನಾರ್ದನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವೈದ್ಯಕೀಯ ಅಧೀಕ್ಷಕ ಡಾ. ದೇವೇಂದ್ರ ಕುಮಾರ್, ಫಿಸಿಷಿಯನ್ ಡಾ. ಸಾತ್ವಿಕ್ ಜೈನ್ ಉಪಸ್ಥಿತರಿದ್ದರು. ಡಾ. ಉಷಾ ಜಿ.ಶೆಟ್ಟಿ ವಂದಿಸಿದರು.ವಿಮಾ ವಿಭಾಗದ ಜಗನ್ನಾಥ ಹಾಗೂ ಪಿ.ಸಿ.ಸಿ ಹೇಮಾವತಿ ಕಾರ್ಯಕ್ರಮ ನಿರೂಪಿಸಿದರು.

ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ, ಸ್ತ್ರೀರೋಗ ತಪಾಸಣೆ, ಮ್ಯಾಮೊಗ್ರಫಿ, ಪಾಪ್ ಪರೀಕ್ಷೆ,ಲ್ಯಾಬ್ ಪರೀಕ್ಷೆ, ವೈದ್ಯರ ಸಲಹೆ ಸಮಾಲೋಚನೆ, ಸಾಮಾನ್ಯ ಔಷಧಗಳು ಉಚಿತವಾಗಿದ್ದವು. 2 ದಿನಗಳ ಉಚಿತ ತಪಾಸಣೆ ಶಿಬಿರದಲ್ಲಿ 204 ಮಂದಿ ಭಾಗವಹಿಸಿದರು

Medical Camps

Related News

Related Events