Contact Mobile: 91 77603 97878, Land: 08256-295611/ 615/616

Medical Camps

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ದಿನಾಂಕ 2 ಏಪ್ರಿಲ್ ಭಾನುವಾರದಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ) ಉಜಿರೆ, ದ.ಕ ಜಿ. ಪಂ ಸರಕಾರಿ ಹಿರಿಯ ಪ್ರಾಥಮಿಕ ಪರ್ಲಾಣಿ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ 2022-23ರ ವಾರ್ಷಿಕ ವಿಶೇಷ ಶಿಬಿರದ ಸಂದರ್ಭದಲ್ಲಿ ಏ. 2ರಂದು ದ.ಕ ಜಿ. ಪಂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪರ್ಲಾಣಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕ ಎಂ. ಜನಾರ್ದನ್ ಶಿಬಿರವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದೇವೇಂದ್ರ ಕುಮಾರ್ ಪಿ, ಎನ್.ಎಸ್.ಎಸ್ ಕ್ಯಾಂಪ್ ಆರ್ಗನೈಸರ್ ಲಕ್ಷ್ಮೀನಾರಾಯಣ ಕೆ, ಅನಿಲ್ ಕುಮಾರ್ ಮ್ಹಾಲಕರು, ಸಂಪೂರ್ಣ ಟೆಕ್ಸ್‍ಟೈಲ್ಸ್, ಪ್ರಮೀಳ ಮತ್ತು ಹರಿಣಾಕ್ಷಿ ಸದಸ್ಯರು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಪರ್ಲಾಣಿ, ಬಬಿತಾ ಆರೋಗ್ಯ ಕಾರ್ಯಕರ್ತೆ ಉಪಸ್ಥಿತರಿದ್ದರು.
ತಜ್ಞ ವೈದ್ಯರುಗಳಾದ ಡಾ. ಸುಭಾಶ್ಚಂದ್ರ, ಡಾ. ಶುೃತಿ, ಡಾ. ಜಸ್ಟಿನ್ ಆರೋಗ್ಯ ತಪಾಸಣೆ ನಡೆಸಿದರು. ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ, ಉಬ್ಬಸ, ಅಸ್ತಮಾ, ಹೃದಯರೋಗ, ಮೂಳೆರೋಗ, ಕಣ್ಣಿನ ತಪಾಸಣೆಗಳನ್ನು ತಜ್ಞ ವೈದ್ಯರು ನಡೆಸಿ ಅಗತ್ಯವಿದ್ದವರಿಗೆ ಉಚಿತ ಔಷಧ ಹಾಗೂ ಕನ್ನಡಕ ವಿತರಿಸಲಾಯಿತು. ಉತ್ತಮ ಆಹಾರ ಕ್ರಮ ಮತ್ತು ಜೀವನ ಶೈಲಿಯ ಬಗ್ಗೆ ಶಿಬಿರದಲ್ಲಿ ಸಲಹೆ ನೀಡಲಾಯಿತು. 195 ಮಂದಿ ಶಿಬಿರದ ಪ್ರಯೋಜನ ಪಡೆದರು.

Medical Camps

Related News

Related Events