Medical Camps
ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಕಣ್ಣಿನ ತಪಾಸಣಾ ಶಿಬಿರ
ಜಗತ್ತು ವರ್ಣಮಯ ಹಾಗೂ ಸೌಂದರ್ಯಮಯವಾಗಿದ್ದು, ಅದನ್ನು ಆಸ್ವಾದಿಸಲು ಭಗವಂತ ನಮಗೆ ಸುಂದರವಾದ ಕಣ್ಣುಗಳನ್ನು ನೀಡಿದ್ದಾನೆ. ಅಂತಹ ಅತ್ಯಮೂಲ್ಯವಾದ ಕಣ್ಣುಗಳಿಗೆ ನಾವೆಲ್ಲ ಅತ್ಯಂತ ಮಹತ್ವ ನೀಡುತ್ತೇವೆ. ಬಡ ಜನತೆ ದೃಷ್ಟಿ ದೋಷದಿಂದ ಬಳಲಬಾರದು ಎಂಬ ಉದ್ದೇಶದಿಂದ ಪೂಜ್ಯ ಹೆಗ್ಗಡೆಯವರ ಆಶಯದಂತೆ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ನಿರ್ದೇಶಕ ಎಂ. ಜನಾರ್ದನ್ ಹೇಳಿದರು.
ಅವರು ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಜು. 26 ಮತ್ತು 27ರಂದು ನಡೆಯಲಿರುವ ಕಣ್ಣಿನ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ, ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಪ್ರತಿದಿನ ಕಣ್ಣಿನ ತಜ್ಞರು ಲಭ್ಯವಿದ್ದು, ಕಣ್ಣಿನ ಪೊರೆಗೆ ಚಿಕಿತ್ಸೆ ಮತ್ತು ಲೆನ್ಸ್ ಅಳವಡಿಕೆ, ದೃಷ್ಟಿದೋಷ ನಿವಾರಣೆ, ಕಂಪ್ಯೂಟರೈಸ್ಡ್ ಕಣ್ಣಿನ ಚಿಕಿತ್ಸೆ, ಕಣ್ಣಿನ ದುರ್ಮಾಂಸ ಚಿಕಿತ್ಸೆ, ಮೆಳ್ಳೆಗಣ್ಣು ಚಿಕಿತ್ಸೆ, ಕಾಂಟಾಕ್ಟ್ ಲೆನ್ಸ್ ಕ್ಲಿನಿಕ್, ಡಯಾಬಿಟಿಕ್ ಕಣ್ಣಿನ ಚಿಕಿತ್ಸಾ ಸೇವೆಗಳು ಲಭ್ಯವಿದೆ ಎಂದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್. ಪಿ, ಮಾತನಾಡಿ ಪೂಜ್ಯರ ಆದೇಶದಂತೆ ರಿಯಾಯಿತಿ ದರದಲ್ಲಿ ನಡೆಯಲಿರುವ ಈ ಕಣ್ಣಿನ ತಪಾಸಣಾ ಶಿಬಿರ ಜನತೆಗೆ ಸದುಪಯೋಗವಾಗಲಿ ಎಂದರು. ಕಣ್ಣಿನ ತಜ್ಞರಾದ ಡಾ| ಸುಭಾಶ್ ಚಂದ್ರ ಕಣ್ಣಿನ ಆರೋಗ್ಯ ರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು. ಡಾ| ಜಸ್ಟಿನ್, ಡಾ| ಜ್ಯೋತಿಸ್ ಸಹಕರಿಸಿದರು. ಎರಡು ದಿನಗಳ ಶಿಬಿರದಲ್ಲಿ 281 ಮಂದಿ ಕಣ್ಣಿನ ತಪಾಸಣಾ ಶಿಬಿರದ ಸದುಪಯೋಗ ಪಡೆದುಕೊಂಡರು. ಈ ಶಿಬಿರದಲ್ಲಿ ರಿಯಾಯತಿ ದರದಲ್ಲಿ ಲ್ಯಾಬ್ ಟೆಸ್ಟ್, ಕಣ್ಣಿನ ಚಿಕಿತ್ಸೆ ಹಾಗೂ ಔಷಧ ನೀಡಲಾಯಿತು.
Medical Camps
Related News