Contact Mobile: 91 77603 97878, Land: 08256-295611/ 615/616

Medical Camps

ರಕ್ತಹೀನತೆಯ ಬಗ್ಗೆ ಜಾಗೃತಿ ಶಿಬಿರ

ಇತ್ತೀಚಿನ ಯುವಪೀಳಿಗೆ ರಕ್ತಹೀನತೆಯಿಂದ ಬಳಲುತ್ತಿದ್ದು, ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಡಿಗ್ರಿ ಕಾಲೇಜು ಎನ್.ಎಸ್.ಎಸ್ ವಿಭಾಗ ಹಾಗೂ ಬೆಂಗಳೂರಿನ ಆಟ್ರಿಮಿಡ್ ಸಂಸ್ಥೆಯ ಸಹಯೋಗದಲ್ಲಿ ನಡೆದ ರಕ್ತಹೀನತೆ ಜಾಗೃತಿ ಶಿಬಿರದಲ್ಲಿ 1450 ವಿದ್ಯಾರ್ಥಿಗಳಿಗೆ ತಪಾಸಣೆ ನಡೆಸಿ ಸೂಕ್ತ ಔಷಧಿ ವಿತರಿಸಲಾಯಿತು.
ದಿನಾಂಕ 30-08-2016 ರಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಡಿಗ್ರಿ ಕಾಲೇಜಿನಲ್ಲಿ ನಡೆದ ಈ ಶಿಬಿರದಲ್ಲಿ ಎಸ್.ಡಿ.ಎಂ ಕಾಲೇಜಿನ ಪಾಂಶುಪಾಲರಾದ ಡಾ| ಕೆ.ಎಸ್ ಮೋಹನ್ ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ| ಸ್ವರ್ಣಲತ ಕಾರ್ಯಕ್ರಮ ಉದ್ಘಾಟಿಸಿದರು. ಅಟ್ರಿಮಿಡ್ ಸಂಸ್ಥೆಯ ಮ್ಯಾನೆಜಿಂಗ್ ಡೈರೆಕ್ಟರ್ ಹೃಷಿಕೇಶ್ ದಾಂಮ್ಲೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯ ಕಾರ್ಯನಿರ್ವಾಹಣಾಧಿಕಾರಿ ಮನ್ಮಥ್ ಕುಮಾರ್ ಎನ್, ಲ್ಯಾಬ್ ಇನ್‍ಚಾರ್ಚ್ ಎಸ್.ಎಸ್ ಬಟ್ ಉಪಸ್ಥಿತರಿದ್ದರು.

Medical Camps

Related Events