Medical Camps
ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಮಹಿಳೆಯರಿಗೆ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅಸ್ಪತ್ರೆಯಲ್ಲಿ ಜುಲೈ 1 ರಂದು ಮಹಿಳೆಯರಿಗೆ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರವು ನಡೆಯಿತು.
ವೈದ್ಯರ ದಿನಾಚರಣೆಯ ಅಂಗವಾಗಿ ನಡೆದ ಈ ಶಿಬಿರದಲ್ಲಿ ತಜ್ಞ ವೈದ್ಯರುಗಳಾದ ಡಾ| ಸ್ವರ್ಣಲತಾ, ಡಾ| ರಶ್ಮಿ.ಸಿ.ಕುಂದರ್, ಡಾ| ಕಮಲಾ ಭಟ್ ಭಾಗವಿಹಿಸಿದ್ದರು. ಶಿಬಿರದಲ್ಲಿ ಸ್ತನದ ತಪಾಸಣೆ, ಗರ್ಭಾಶಯದ ತಪಾಸಣೆ ಹಾಗೂ ಸ್ತ್ರೀರೋಗ ಸಂಬಂಧಪಟ್ಟ ಖಾಯಿಲೆಗಳ ತಪಾಸಣೆ ನಡೆಸಿ ಸೂಕ್ತ ಮಾಹಿತಿಯನ್ನು ನೀಡಲಾಯಿತು.
ಉಚಿತವಾಗಿ ನಡೆದ ಈ ಶಿಬಿರದಲ್ಲಿ ಅನೇಕ ಮಂದಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದರು ಎಂದು ಅಸ್ಪತ್ರೆಯ ಕಾರ್ಯನಿರ್ವಾಹಣಾಧಿಕಾರಿ ಮನ್ಮಥ್ ಕುಮಾರ್.ಎನ್ ತಿಳಿಸಿದ್ದಾರೆ.