Medical Camps
ಎಸ್.ಡಿ.ಎಂ ಆಸ್ಪತ್ರೆಯಲ್ಲಿ ವ್ಯಕ್ತಿತ್ವ ವಿಕಸನ ಶಿಬಿರ
ಎಷ್ಟೋ ಬಾರಿದುಃಖ, ನೋವು ನಮ್ಮೊಳಗಿದ್ದರೂ ನಗು-ನಗುತ್ತಾ ಇರಬೇಕಾಗುತ್ತದೆ.ಕೆಲವೊಂದು ಸಂದರ್ಭದಲ್ಲಿ ದುಃಖ ಅಂತರಂಗದೊಳಗಿದ್ದರೂ ಖುಷಿಯಲ್ಲಿರುವವರಂತೆ ಮುಖವಾಡ ಹಾಕಬೇಕಾಗುತ್ತದೆ.ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುವವರಿಗೆ ಇಂತಹ ಮುಖವಾಡ ಅನಿವಾರ್ಯ ಎಂದು ಡಾ| ಮೇರಿ ಎಂ.ಜೆ ಹೇಳಿದರು.ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ ನಡೆದ ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಾ “ಹೆಚ್ಚು ಕೇಳಿ, ಕಡಿಮೆ ಮಾತನಾಡಿ.ಕಡಿಮೆ ಮಾತಿನಲ್ಲಿ ಹೆಚ್ಚು ಹೇಳಿ” ಎಂಬ ಸಂದೇಶ ನೀಡಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕಾಲೇಜು ಸಮಾಜ ಕಾರ್ಯ ವಿಭಾಗದ ಜಂಟಿ ಆಶ್ರಯದಲ್ಲಿಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಕಾರ್ಯನಿರ್ವಾಹಣಾಧಿಕಾರಿ ಎನ್. ಮನ್ಮಥ್ ಕುಮಾರ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ ಹುಟ್ಟಿನಿಂದ ಬರುವ ವ್ಯಕ್ತಿತ್ವ ಮತ್ತು ನಾವು ಗಳಿಸುವ ವ್ಯಕ್ತಿತ್ವಇವೆರಡೂ ಕೂಡ ಮನುಷ್ಯನ ನಡತೆಯ ಮೇಲೆ ಪರಿಣಾಮ ಬೀರುತ್ತದೆ. ಸಮಾಜದಲ್ಲಿ ಗಣ್ಯ ವ್ಯಕ್ತಿಯಾಗಬೇಕಾದರೆ ಒಳ್ಳೆಯ ವ್ಯಕ್ತಿತ್ವವನ್ನು ರೂಢಿಸಿಕೊಳ್ಳಬೇಕೆಂದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕಾಲೇಜು ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ಪುರಂದರ ಇವರು ಸ್ವಾಗತಿಸಿ, ಕುಮಾರಿ ರಮ್ಯಾ ವಂದಿಸಿದರು.ಶ್ರೀಮತಿ ಚೈತನ್ಯಾ ಕಾರ್ಯಕ್ರಮ ನಿರೂಪಿಸಿದರು.ಡಾ| ಚಂದ್ರಶೇಖರ್ ಹಾಗೂ ಡಾ| ಸಂದೀಪ್ ಹೆಚ್.ಎಸ್ ಉಪಸ್ಥಿತರಿದ್ದರು.
ವರದಿ: ನಾರಾಯಣ.ಬಿ