Medical Camps
ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಮಾನಸಿಕ ಒತ್ತಡ ಮತ್ತು ಪರಿಹಾರ ಕುರಿತು ಮಾಹಿತಿ ಕಾರ್ಯಾಗಾರ
ಮಾನಸಿಕ ಒತ್ತಡ ಒಂದು ಖಾಯಿಲೆ ಅಲ್ಲ. ಒತ್ತಡ ಇಲ್ಲದೇ ಇದ್ದಾಗ ಮನುಷ್ಯ ಸೋಮಾರಿಯಾಗುತ್ತಾನೆ. ಸ್ವಲ್ಪ ಮಟ್ಟಿನ ಒತ್ತಡ ಮನುಷ್ಯನನ್ನು ಕ್ರಿಯಾಶೀಲನನ್ನಾಗಿ ಮಾಡುತ್ತದೆ ಎಂದು ಖ್ಯಾತ ಮನೋರೋಗ ತಜ್ಞರಾದ ಡಾ| ಅನಿಲ್ ಕಾಕುಂಜೆ ಹೇಳಿದರು.
ಅವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ ಉಜಿರೆ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕಾಲೇಜಿನ ಸಮಾಜ ಕಾರ್ಯ ವಿಭಾಗ ಇವರ ಸಹಯೋಗದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ ಉಜಿರೆ ಇಲ್ಲಿ ಆಗಸ್ಟ್ 1 ರಂದು ನಡೆದ ಮಾನಸಿಕ ಒತ್ತಡ ಮತ್ತು ಪರಿಹಾರ ಕುರಿತು ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಾ ನಮ್ಮನ್ನು ನಾವು ಅರ್ಥೈಸಿಕೊಂಡಾಗ ನಮ್ಮ ಅರ್ಧದಷ್ಟು ಮಾನಸಿಕ ಒತ್ತಡ ನಿವಾರಣೆಯಾದಂತೆ ಎಂದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯ ಕಾರ್ಯನಿರ್ವಾಣಾಧಿಕಾರಿ ಮನ್ಮಥ್ ಕುಮಾರ್ ಮಾತನಾಡುತ್ತಾ ಮನೋರೋಗದ ಬಗ್ಗೆ ಕೀಳರಿಮೆಇರಬಾರದು ಮಾನಸಿಕ ಒತ್ತಡ ಅಥವಾ ಖಾಯಿಲೆಗಳು ಇದ್ದಾಗ ಮನೋರೋಗ ತಜ್ಞರನ್ನು ಸಂಪರ್ಕಿಸಲು ಹಿಂಜರಿಯಬಾರದು ಎಂದರು.ಎಸ್.ಡಿ.ಎಂ ಸ್ನಾತಕೋತ್ತರ ಕಾಲೇಜಿನ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ಪುರಂದರ ಸ್ವಾಗತಿಸಿ, ಕುಮಾರಿ ರಮ್ಯಾ ಧನ್ಯವಾದ ಅರ್ಪಿಸಿದರು.ಶ್ರೀಮತಿ ಚೈತನ್ಯಾ ಕಾರ್ಯಕ್ರಮ ನಿರೂಪಿಸಿದರು.ಎಸ್.ಡಿ.ಎಂ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಪ್ರಭಾಶ್ ಕುಮಾರ್ ಉಪಸ್ಥಿತರಿದ್ದರು.
ಎಸ್.ಡಿ.ಎಂ ಆಸ್ಪತ್ರೆಯ ಸಿಬ್ಬಂದಿ ಹಾಗೂ ಎಸ್.ಡಿ.ಎಂ ಸ್ನಾತಕೋತ್ತರ ಕಾಲೇಜಿನ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಾಗಾರದ ಪ್ರಯೋಜನ ಪಡೆದರು.
ವರದಿ: ನಾರಾಯಣ. ಬಿ