Medical Camps
ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಉಚಿತ ತಪಾಸಣಾ ಶಿಬಿರಗಳು
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ ಉಜಿರೆ ಹಾಗೂ ಎ.ಆರ್.ಎಂ.ಸಿ ಐ.ವಿ.ಎಫ್ ಫರ್ಟಿಲಿಟಿ ಸೆಂಟರ್‍ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಬಂಜೆತನ ತಪಾಸಣಾ ಶಿಬಿರ ನಡೆಯಿತು.
ಜ.23 ರಂದು ಬೆಳಿಗ್ಗೆ ಗಂಟೆ 10.00 ರಿಂದ ಮಧ್ಯಾಹ್ನ 1.00ರವರೆಗೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ ನಡೆದ ಬಂಜೆತನ ತಪಾಸಣಾ ಶಿಬಿರದಲ್ಲಿ ತಜ್ಞ ವೈದ್ಯರುಗಳಾದ ಡಾ| ಗೌರವ್‍ಗುಜರಾತಿ, ಡಾ| ಸುಸಾನ ಪ್ರದೀಪ್‍ಜಾನ್ ವೈದ್ಯಕೀಯ ತಪಾಸಣೆ ನಡೆಸಿದರು.
ಇದೇ ದಿನ ಸಿಪ್ಲ ಕಂಪೆನಿಯ ಸಹಯೋಗದಲ್ಲಿ ಶ್ವಾಸಕೋಶ ತಪಾಸಣಾ ಶಿಬಿರ ನಡೆಯಿತು.ಈ ಎರಡೂ ಶಿಬಿರದಲ್ಲಿ ತಪಾಸಣೆ ಮತ್ತು ಸಲಹೆಗಳನ್ನು ಉಚಿತವಾಗಿ ನೀಡಲಾಯಿತು.ಯಶಸ್ವಿಯಾಗಿ ನಡೆದ ಈ ಶಿಬಿರದಲ್ಲಿ ಅನೇಕ ಮಂದಿ ಶಿಬಿರದ ಪ್ರಯೋಜನ ಪಡೆದರು ಎಂದು ಆಸ್ಪತ್ರೆಯ ಕಾರ್ಯನಿರ್ವಾಹಣಾಧಿಕಾರಿ ಎನ್. ಮನ್ಮಥ್ ಕುಮಾರ್ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ನಾರಾಯಣ. ಬಿ

