Medical Camps
ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಉಚಿತ ಅಸ್ಥಿ ಸಾಂದ್ರತಾ ಮಾಪಕ ತಪಾಸಣಾ ಶಿಬಿರ
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ ಉಚಿತ ಅಸ್ಥಿ (ಮೂಳೆ) ಸಾಂದ್ರತಾ ಮಾಪಕ ತಪಾಸಣಾ ಶಿಬಿರವು ಫೆ. 25 ರಂದು ನಡೆಯಿತು.
ಫಾರ್ಮೆಡ್ ಲಿಮಿಟೆಡ್ ಮತ್ತು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯ ಸಹಯೋಗದಲ್ಲಿ ನಡೆದ ಈ ಶಿಬಿರದಲ್ಲಿ ಬೆನ್ನು ನೋವು, ಸೊಂಟ ನೋವು, ಸ್ನಾಯುಗಳಲ್ಲಿ ನೋವು, ಕೈಕಾಲು ನೋವು ಇರುವವರು ಸೇರಿದಂತೆ ಅನೇಕ ಮಂದಿ ಈ ಶಿಬಿರದ ಸದುಪಯೋಗ ಪಡೆದರು.
ಉಚಿತವಾಗಿ ನಡೆದ ಈ ತಪಾಸಣಾ ಶಿಬಿರದಲ್ಲಿ ಎಸ್.ಡಿ.ಎಂ ಆಸ್ಪತ್ರೆಯ ಮೂಳೆ ಶಸ್ತ್ರಚಿಕಿತ್ಸಾ ತಜ್ಞರಾದ ಡಾ| ಶಿವಶಂಕರ್ ಟಿ.ಹೆಚ್ ಮತ್ತು ವೈದ್ಯರ ತಂಡದಿಂದ ವೈದ್ಯಕೀಯ ತಪಾಸಣೆ, ಔಷಧ ಮತ್ತು ಸಲಹೆ ನೀಡಲಾಯಿತು. ಫಾರ್ಮೆಡ್ ಲಿಮಿಟೆಡ್‍ನ ತಂತ್ರಜ್ಞರು ಅಸ್ಥಿ ಸಾಂದ್ರತಾ ಮಾಪಕ ತಪಾಸಣೆಯಲ್ಲಿ ಸಹಕರಿಸಿದರು.
ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಪ್ರಭಾಶ್ ಕುಮಾರ್, ಕಾರ್ಯನಿರ್ವಾಹಣಾಧಿಕಾರಿ ಮನ್ಮಥ್ ಕುಮಾರ್. ಎನ್ ಉಪಸ್ಥಿತರಿದ್ದರು.
ವರದಿ: ನಾರಾಯಣ. ಬಿ