Medical Camps
ಉಜಿರೆ: ಫೆ. 13ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ ಉಜಿರೆ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಜಿರೆ ವಲಯ, ಉಜಿರೆ ಪ್ರಗತಿಬಂಧು ಒಕ್ಕೂಟದ ಇವರ ಸಹಕಾರದೊಂದಿಗೆ ಉಜಿರೆ ಶಾರದಾ ಮಂಟಪದಲ್ಲಿ ಫೆ. 13ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಎಸ್.ಡಿ.ಎಂ ಆಸ್ಪತ್ರೆಯ ನಿರ್ದೇಶಕರಾದ ಎಂ. ಜನಾರ್ದನ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ವೈದ್ಯಕೀಯ ಅಧೀಕ್ಷಕರಾದ ಡಾ| ರಂಜನ್ ಕುಮಾರ್, ವೈದ್ಯರುಗಳಾದ ಡಾ| ಜಸ್ಟಿನ್, ಡಾ| ಕರಿಷ್ಮಾ, ಡಾ| ಚಿನ್ಮಯ್, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುಷ್ಪಾ ಆರ್. ಶೆಟ್ಟಿ, ಎಸ್.ಕೆ.ಡಿ.ಆರ್.ಡಿ.ಪಿ ಉಜಿರೆ ವಲಯ ಮೇಲ್ವಿಚಾರಕಿ ಅಶ್ವಿತಾ, ವಲಯ ಅಧ್ಯಕ್ಷರಾದ ಉಮರಬ್ಬ, ಒಕ್ಕೂಟದ ಅಧ್ಯಕ್ಷರಾದ ನೀಲಾ ಹಾಗೂ ಜಗನ್ನಾಥ, ಸೇವಾ ಪ್ರತಿನಿಧಿಗಳಾದ ಪ್ರೇಮಲತಾ, ಚಂದ್ರಾವತಿ, ಸೌಮ್ಯ, ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ಪರ್ಚೇಸ್ ಮೆನೇಜರ್ ಅಜಯ್ ಕುಮಾರ್, ಮಾರ್ಕೆಟಿಂಗ್ ಎಕ್ಷ್‍ಕ್ಯೂಟಿವ್ ಸುಮಂತ್ ರೈ, ಸ್ವಚ್ಚತಾ ವಿಭಾಗದ ಇನ್‍ಚಾರ್ಚ್ ಮೋಹಿನಿ ಉಪಸ್ಥಿತರಿದ್ದರು.
ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ಪಿಸಿಸಿ ಇನ್‍ಚಾರ್ಚ್ ಹೇಮಾವತಿ ಆಸ್ಪತ್ರೆಯಲ್ಲಿ ದೊರೆಯುವ ಸೌಲಭ್ಯಗಳ ಮಾಹಿತಿ ಹಾಗೂ ಇನ್ಶ್ಯೂರೆನ್ಸ್ ವಿಭಾಗದ ಜಗನ್ನಾಥ್ ನಗದು ರಹಿತ ಆರೋಗ್ಯ ವಿಮಾ ಸೌಲಭ್ಯಗಳ ಮಾಹಿತಿ ನೀಡಿದರು. ಉಜಿರೆ ಒಕ್ಕೂಟದ ಸದಸ್ಯರು ಹಾಗೂ ಸಾರ್ವಜನಿಕರು ಸೇರಿದಂತೆ 130 ಮಂದಿ ಶಿಬಿರದ ಸದುಪಯೋಗ ಪಡೆದು, ವೈದ್ಯರ ಸೇವೆ ಮತ್ತು ಶಿಬಿರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
Medical Camps
Related News