Contact Mobile: 91 77603 97878, Land: 08256-295611/ 615/616

Medical Camps

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕಣ್ಣಿನ ತಪಾಸಣಾ ಶಿಬಿರ

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪೂಜ್ಯ ಹೆಗ್ಗಡೆಯವರ ಹಾಗೂ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಆದೇಶದಂತೆ, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಇವರ ಮಾರ್ಗದರ್ಶನದಲ್ಲಿ ದಿನಾಂಕ 25-05-2025ನೇ ಆದಿತ್ಯವಾರ ಬೆಳಿಗ್ಗೆ 9.00ರಿಂದ ಮಧ್ಯಾಹ್ನ 1.00ರವರೆಗೆ ಕಣ್ಣಿನ ತಪಾಸಣಾ ಶಿಬಿರ ನಡೆಯಿತು.
ಕಣ್ಣಿನ ತಜ್ಞರಾದ ಡಾ| ಸುಭಾಶ್ಚಂದ್ರ ಶಿಬಿರ ಉದ್ಘಾಟಿಸಿ, ಕಣ್ಣಿನ ಆರೋಗ್ಯ ಕಾಪಾಡುವ ವಿಧಾನ ಮತ್ತು ಕಣ್ಣಿನ ರಕ್ಷಣೆಯ ವಿಷಯದಲ್ಲಿ ಜನರಿಗೆ ಇರುವ ಗೊಂದಲಗಳ ಬಗ್ಗೆ ವಿವರಿಸಿದರು. ಕಣ್ಣಿನ ಪೊರೆಗೆ ಚಿಕಿತ್ಸೆ ಮತ್ತು ಲೆನ್ಸ್ ಅಳವಡಿಕೆ, ದೃಷ್ಟಿದೋಷ ನಿವಾರಣೆ, ಕಂಪ್ಯೂಟರೈಸ್ಡ್ ಕಣ್ಣಿನ ಚಿಕಿತ್ಸೆ, ಕಾರ್ನಿಯಾ ರೆಟಿನಾ ಸ್ಕ್ರೀನಿಂಗ್, ಕಣ್ಣಿನ ದುರ್ಮಾಂಸ ಚಿಕಿತ್ಸೆ, ಮೆಳ್ಳೆಗಣ್ಣು ಚಿಕಿತ್ಸೆ, ಕಾಂಟಾಕ್ಟ್‍ಲೆನ್ಸ್ ಕ್ಲಿನಿಕ್, ಡಯಾಬಿಟಿಕ್ ಕಣ್ಣಿನ ಚಿಕಿತ್ಸೆ, ಮುಂತಾದ ಸೇವೆಗಳು ಈ ಶ್ಪತ್ರೆಯಲ್ಲಿ ಲಭ್ಯವಿದೆ ಎಂದು ತಿಳಿಸಿದರು. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ಸಾತ್ವಿಕ್ ಜೈನ್ ಆಸ್ಪತ್ರೆಯಲ್ಲಿ ದೊರೆಯುವ ವಿಶೇಷ ವೈದ್ಯಕೀಯ ಸೇವೆಗಳನ್ನು ತಿಳಿಸಿಕೊಟ್ಟರು.
ಈ ಶಿಬಿರದಲ್ಲಿ ವೈದ್ಯರ ಸಮಾಲೋಚನೆ ಉಚಿತವಾಗಿತ್ತು, 10% ರಿಯಾಯಿತಿ ದರದಲ್ಲಿ ಔಷಧ, ಒಳರೋಗಿ ವಿಭಾಗದ ಶುಲ್ಕದಲ್ಲಿ 10% ರಿಯಾಯಿತಿ, ಲ್ಯಾಬ್ ಹಾಗೂ ರೇಡಿಯಾಲಜಿ ಪರೀಕ್ಷೆಯಲ್ಲಿ 20% ರಿಯಾಯಿತಿ, 25% ರಿಯಾಯಿತಿ ದರದಲ್ಲಿ ಉತ್ತಮ ಗುಣಮಟ್ಟದ ಕನ್ನಡಕ ನೀಡಲಾಯಿತು. 162 ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.
ಸಂಪರ್ಕಾಧಿಕಾರಿ ಚಿದಾನಂದ ಕಾರ್ಯಕ್ರಮ ನಡೆಸಿಕೊಟ್ಟರು. ಮಾರ್ಕೆಟಿಂಗ್ ಎಕ್ಷ್ ಕ್ಯೂಟಿವ್ ಸುಮಂತ್ ರೈ ಸಹಕರಿಸಿದರು.

Medical Camps

Related News

Related Events