Medical Camps
ಉಜಿರೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಂಧಿವಾತ, ಅಟೋ ಇಮ್ಯೂನ್ ತೊಂದರೆಗಳ ಚಿಕಿತ್ಸಾ ಶಿಬಿರ
ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉಜಿರೆ ಮತ್ತು ಕೆಎಂಸಿ ಆಸ್ಪತ್ರೆ ಅತ್ತಾವರ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಸಂಧಿವಾತ ಮತ್ತು ಅಟೋ ಇಮ್ಯೂನ್ ತೊಂದರೆಗಳ ಚಿಕಿತ್ಸಾ ಶಿಬಿರವು ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲಿನ ಹೊರ ರೋಗಿ ವಿಭಾಗದಲ್ಲಿ ಇಂದು ನಡೆಯಿತು. ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಉದ್ಘಾಟನೆಗೊಂಡಿತು.
ಆಸ್ಪತ್ರೆಯ ಎಂ.ಡಿ ಜನಾರ್ಧನ ಎಂ. ಅವರು ಮಾತನಾಡಿ ರೋಗಿಗಳು ಚಿಕಿತ್ಸೆಗಾಗಿ ಮಂಗಳೂರಿಗೆ ಪ್ರಯಾಣವನ್ನು ಮಾಡಬೇಕಾದರೆ ಸುಮಾರು ಒಂದೂವರೆ ಗಂಟೆ ತೆಗೆದುಕೊಳ್ಳುತ್ತೆ. ಹೋಗಿ ಬರೋದಕ್ಕೆ ನಾಲ್ಕು ಗಂಟೆ ಬೇಕಾಗುತ್ತೆ. 5 ರಿಂದ 6 ಗಂಟೆ ಆಸ್ಪತ್ರೆಗಳಲ್ಲಿ ಕಾಯಬೇಕಾದ ಪರಿಸ್ಥಿತಿ ಇರುತ್ತೆ.
ಈ ನಿಟ್ಟಿನಲ್ಲಿ ಇಂತಹ ಒಂದು ಅರ್ಥಪೂರ್ಣ ಶಿಬಿರವನ್ನು ಆಯೋಜನೆ ಇಂದು ಮಾಡಲಾಗಿದೆ ಎಂದರು. ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಕನ್ಸಲ್ವೆಂಟ್ ರುಮಟಾಲಜಿಸ್ಟ್ ಮತ್ತು ಕ್ಲಿನಿಕಲ್ ಇಮ್ಯೂನಾಲಜಿಸ್ಟ್ ಕೆ.ಎಂ.ಸಿ ಆಸ್ಪತ್ರೆ ಅತ್ತಾವರ ಮಂಗಳೂರು ಇದರ ಡಾ.ಶಿವ್ರಾಜ್ ಪಡಿಯಾರ್ ಅವರು ಶಿಬಿರದ ಪ್ರಯೋಜನವನ್ನು ರೋಗಿಗಳು ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಆಸ್ಪತ್ರೆಯ ಮೆಡಿಕಲ್ ಸೂಪರಿಡೆಂಟ್ ಆಗಿರುವ ಡಾ. ದೇವೇಂದ್ರ ಪಿ. ಅವರು ಮಾತನಾಡಿ, ಹಳ್ಳಿ ಭಾಗದಲ್ಲಿ ಆಗುತ್ತಿರುವ ಈ ಮೆಡಿಕಲ್ ಕ್ಯಾಂಪ್ನ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಿ ಎಂದರು. ಇದೇ ವೇಳೆ ಆಸ್ಪತ್ರೆಯ ಅಭಿವೃದ್ಧಿಗೆ ಶ್ರಮಿಸಿದ ಪಿ.ಆರ್.ಒ ಸುಮಂತ್ ರೈ ಅವರಿಗೆ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆ ಅತ್ತಾವರ ಇದರ ಕನ್ಸಲೆಂಟ್ ರುಮಟಾಲಜಿಸ್ಟ್ ಮತ್ತು ಕ್ಲಿನಿಕಲ್ ಇಮ್ಯೂನಾಲಜಿಸ್ಟ್ ವಿಭಾಗದ ಡಾ.ಪ್ರತ್ಯಷ ಮಣಿಕುಪ್ಪಂ, ಮತ್ತು ಅತ್ತಾವರ ಆಸ್ಪತ್ರೆಯ ಆಡಳಿತಾಧಿಕಾರಿಗಳು, ಸಿಬ್ಬಂದಿಗಳು, ಎಸ್ಡಿಎಂ ಆಸ್ಪತ್ರೆಯ ಮೆಡಿಕಲ್ ಸೂಪರಿಡೆಂಟ್ ಆಗಿರುವ ಡಾ. ದೇವೇಂದ್ರ ಪಿ., ವೈದ್ಯರುಗಳಾದ ಡಾ.ರಜತ್, ಡಾ. ಯಶಸ್ವಿನಿ, ಡಾ. ಪ್ರತೀಶ್, ಎಸ್ಡಿಎಂ ಆಸ್ಪತೆಯ ಬೇರೆ ಬೇರೆ ವಿಭಾಗದ ಮುಖ್ಯಸ್ಥರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಜಗನ್ನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Medical Camps
Related News