Medical Camps
ಉಜಿರೆ ಎಸ್ .ಡಿ. ಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆರೋಗ್ಯ ತಪಾಸಣಾ ಶಿಬಿರ
ಉಜಿರೆ: ಎಸ್. ಡಿ. ಎಂ ಇಂಜಿನಿಯರಿಂಗ್ ಕಾಲೇಜಿನ ಓ.S.S ಘಟಕದ ವತಿಯಿಂದ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಕಾಲೇಜಿನ ವಿದ್ಯಾರ್ಥಿನಿಯ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ದೇಹದ ಆರೋಗ್ಯ ಹಾಗೂ ಸದೃಢತೆಗೆ ಮಾನಸಿಕ ಆರೋಗ್ಯದ ಅತಿ ಮುಖ್ಯ. ಹಾಗಾಗಿ ನಮ್ಮ ದೈನಂದಿನ ಚಟುವಟಿಕೆಯಲ್ಲಿ ವ್ಯಾಯಾಮ, ಉತ್ತಮ ಆಹಾರ ಪದ್ಧತಿ, ಆಧ್ಯಾತ್ಮಿಕ, ಉತ್ತಮ ಹವ್ಯಾಸ ಮತ್ತು ಚಿಂತನೆಯನ್ನು ಅಳವಡಿಸಿಕೊಂಡಲ್ಲಿ ಒಳ್ಳೆಯ ಆರೋಗ್ಯವನ್ನು ಹೊಂದಬಹುದು ಎಂದು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಉಜಿರೆ ಎಸ್ ಡಿ ಎಂ ಆಸ್ಪತ್ರೆಯ ವೈದ್ಯ ಡಾII. ಜ್ಯೋತಿಸ್. ಉದಾಹರಣೆ ಸಹಿತವಾಗಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಅಶೋಕ್ ಕುಮಾರ್ ಓ.S.S ಘಟಕದ ಮುಖ್ಯಸ್ಥರಾದ ಮಹೇಶ್ ಪಾಟೀಲ್ ಮತ್ತು ದರ್ಶನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಆದಿತಿ ಜೋಶಿ ಕಾರ್ಯಕ್ರಮವನ್ನು ನಿರೂಪಿಸಿದರು, ಸುರಭಿ ಪಾಟೀಲ್ ಪ್ರತಿಜ್ಞೆ ಬೋಧಿಸಿ, ಅಂಜನ ವಂದನಾರ್ಪಣೆ ಸಲ್ಲಿಸಿದರು. ಈ ಶಿಬಿರದಲ್ಲಿ ಸುಮಾರು 70 ವಿದ್ಯಾರ್ಥಿನಿಯರು ಆರೋಗ್ಯ ತಪಾಸಣಾ ಮಾಡಿಕೊಂಡರು.




