Medical Camps
ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಯೂರಿಕ್‍ಆಮ್ಲ ಉಚಿತ ತಪಾಸಣಾ ಶಿಬಿರ
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ ಡಿಸೆಂಬರ್ 19ನೇ ಶನಿವಾರ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.00ರವರೆಗೆ ಯೂರಿಕ್‍ಆಮ್ಲ ಉಚಿತ ತಪಾಸಣಾ ಶಿಬಿರ ಮತ್ತು 23ನೇ ಬುಧವಾರ ಶ್ವಾಸಕೋಶ ತಪಾಸಣಾ ಶಿಬಿರ ನಡೆಯಿತು.
ಡಾ| ಲೋಕೇಶ್ ಕುಮಾರ್ ಇವರ ನೇತೃತ್ವದಲ್ಲಿ ನಡೆದ ಯೂರಿಕ್‍ಆಮ್ಲದ ಉಚಿತ ತಪಾಸಣಾ ಶಿಬಿರದಲ್ಲಿ ರಕ್ತ ತಪಾಸಣೆ ಮತ್ತು ಸಲಹೆ ಸಂಪೂರ್ಣ ಉಚಿತವಾಗಿತ್ತು.ಶ್ವಾಸಕೋಶ ತಪಾಸಣಾ ಶಿಬಿರದಲ್ಲಿ ಅಸ್ತಮಾ ಮತ್ತು ಶ್ವಾಸಕೋಶದ ಸಮಸ್ಯೆ ಇರುವವರು ಭಾಗವಹಿಸಿದ್ದರು ಎಂದು ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎನ್. ಮನ್ಮಥ್ ಕುಮಾರ್ ತಿಳಿಸಿದ್ದಾರೆ.