Medical Camps
ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಸಪ್ತಾಹ
ವಿಜಯ ಬ್ಯಾಂಕ್ ಸಹಯೋಗದಲ್ಲಿ ಉಜಿರೆಯಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ ಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ನ.30 ರಿಂದ ಡಿ.6 ರವರೆಗೆ ನಡೆಯಿತು.
ನವೆಂಬರ್ 30 ರಂದು ಪೂಜ್ಯ ಡಾ| ಡಿ ವೀರೇಂದ್ರ ಹೆಗ್ಗಡೆಯವರಿಂದ ಉದ್ಘಾಟಣೆಗೊಂಡ ಕಾರ್ಯಕ್ರಮದಲ್ಲಿ ವಿಜಯ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಕಾರ್ಯನಿರ್ವಾಹಣಾಧಿಕಾರಿಯಾಗಿರುವ ಕಿಶೋರ್ ಸಾನ್ಸಿ, ಬೆಂಗಳೂರು, ಮಹಾಪ್ರಬಂಧಕಾರದ ಸತೀಶ್ ಬಲ್ಲಾಳ್ , ಉಪಮಹಾಪ್ರಬಂಧಕರಾದ ಅನಿಲ್.ಕೆ ಶೆಟ್ಟಿ, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕೇಸ್ತರರಾದ ವಿಜಯರಾಘವ ಪಡವೆಟ್ನಾಯ, ಎಸ್.ಡಿ.ಎಂ.ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಡಾ| ಬಿ.ಯಶೋವರ್ಮ, ಎಸ್.ಡಿ.ಎಂ ಮೆಡಿಕಲ್ ಟ್ರಸ್ಟ್ ಕಾರ್ಯದರ್ಶಿ ಶಿಶುಪಾಲ್ ಪೂವಣಿ, ಎಸ್.ಡಿ.ಎಂ ಆಸ್ಪತ್ರೆಯ ಕಾರ್ಯನಿರ್ವಾಣಾಧಿಕಾರಿ ಎನ್.ಮನ್ಮಥ್ ಕುಮಾರ್, ವಿಜಯ ಬ್ಯಾಂಕಿನ ಉಜಿರೆ ಶಾಖೆಯ ವ್ಯವಸ್ಥಾಪಕರಾದ ಅನಿಲ್ ಕುಮಾರ್, ಧರ್ಮಸ್ಥಳ ಶಾಖೆಯ ವ್ಯವಸ್ಥಾಪಕರಾದ ಪ್ರಸಾದ್ ಉಪಸ್ಥಿತರಿದ್ದರು.
ನವೆಂಬರ್ 30 ರಿಂದ ಡಿಸೆಂಬರ್ 6ರವರೆಗೆ 7 ದಿನಗಳ ಕಾಲ ನಡೆದ ಈ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಎಸ್.ಡಿ.ಎಂ ಆಸ್ಪತ್ರೆಯ ವೈದ್ಯರುಗಳಾದ ಡಾ| ಲೋಕೇಶ್ ಕುಮಾರ್-ಫಿಸಿಷಿಯನ್, ಡಾ| ಸಂದೀಪ್ ಹೆಚ್. ಎಸ್-ಮಕ್ಕಳರೋಗ ತಜ್ಞರು, ಡಾ| ಸ್ವರ್ಣಲತಾ- ಹೆರಿಗೆ ಮತ್ತು ಸ್ರ್ತೀರೋಗ ತಜ್ಞರು, ಡಾ| ಚಂದ್ರಶೇಖರ್ ಚವಾಣ್-ಶಸ್ತ್ರಚಿಕಿತ್ಸಾ ತಜ್ಞರು, ಡಾ| ಶಿವಶಂಕರ್ ಟಿ.ಹೆಚ್-ಮೂಳೆರೋಗ ತಜ್ಞರು, ಡಾ| ರಂಜನ್ ಕುಮಾರ್ ಕಿವಿ ,ಮೂಗು,ಗಂಟಲು ತಜ್ಞರು, ಡಾ| ಕೃಷ್ಣ ವಾಸುದೇವ್-ಫಿಷಿಶಿಯನ್, ಡಾ| ಅನಿಲ್ ಕಾಕುಂಜೆ-ಮನೋರೋಗ ತಜ್ಞರು, ಡಾ| ರಮೇಶ್-ಕಣ್ಣಿನ ತಜ್ಞರು, ಡಾ| ನಿಶ್ಚಿತ್ ಡಿ’ಸೋಜಾ-ಮೂತ್ರರೋಗ ತಜ್ಞರು, ಡಾ| ಮಿಷೆಲ್ ಫೆರ್ನಾಂಡಿಸ್-ಚರ್ಮರೋಗ ತಜ್ಞರು, ಡಾ| ರಶ್ಮಿ ಕುಂದರ್-ರೋಗಶಾಸ್ತ್ರ ತಜ್ಞರು, ಡಾ| ಪ್ರಭಾಶ್ ಕುಮಾರ್, ಡಾ| ಬಾಲಕೃಷ್ಣ ಭಟ್, ಡಾ| ಕಮಲ ಭಟ್ ಇವರು 2000 ಕ್ಕೂ ಮಿಕ್ಕಿದ ಜನರಿಗೆ ರೋಗ ತಪಾಸಣೆ ಮಾಡಿ ಸೂಕ್ತಚಿಕಿತ್ಸೆ ನೀಡಿದರು. ಈ ಶಿಬಿರದಲ್ಲಿ ಔಷಧ, ರಕ್ತಪರೀಕ್ಷೆ, ಎಕ್ಸ್-ರೇ, ಸಿಟಿ ಸ್ಕ್ಯಾನ್ ಮತ್ತು ಸ್ಕ್ಯಾನಿಂಗ್ ಸಂಪೂರ್ಣ ಉಚಿತವಾಗಿತ್ತು.