Medical Camps
ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಉಚಿತ ಶ್ವಾಸಕೋಶ ಶಿಬಿರ
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ ಮೇ 24 ಗುರುವಾರ ಬೆಳಿಗ್ಗೆ ಗಂಟೆ 9.30 ರಿಂದ ಮಧ್ಯಾಹ್ನ 1.00ವರೆಗೆ ಶ್ವಾಸಕೋಶ ತಪಾಸಣಾ ಶಿಬಿರ ನಡೆಯಲಿದೆ.
ಉಸಿರಾಡಲು ಕಷ್ಟಪಡುವುದು, ಪದೇ-ಪದೇ ಕಾಣಿಸಿಕೊಳ್ಳುವ ಕೆಮ್ಮು ಅಥವಾ ದಮ್ಮು, ಎದೆ ಬಿಗಿತದಿಂದ ಉಬ್ಬಸ ಹಾಗೂ ಕೆಮ್ಮು, ಹೊಗೆ, ಧೂಳು, ತಂಪುಪಾನೀಯ, ವಾತಾವರಣದಲ್ಲಿ ಏರುಪೇರಿನೊಂದಿಗೆ ಅಲರ್ಜಿ ಅಥವಾ ಕೆಮ್ಮು, ಉಬ್ಬಸ ಕಾಣಿಸಿಕೊಳ್ಳುವುದು, ಮೂಗು ಕಟ್ಟಿದಂತಾಗುವುದು, ಕಣ್ಣು ಕೆಂಪಾಗುವುದು ಇತರ ಶ್ವಾಸಕೋಶಗಳ ತೊಂದರೆಗಳಿರುವವರು ಈ ಶಿಬಿರದಿಂದ ಪ್ರಯೋಜನ ಪಡೆಯಬಹುದು.
ಈ ಶಿಬಿರದಲ್ಲಿ ರೋಗ ತಪಾಸಣೆಯು ಉಚಿತವಾಗಿರುತ್ತದೆ. ಹೆಚ್ಚಿನ ವಿವರಗಳಿಗೆ ಅಸ್ಪತ್ರೆಯ ದೂರವಾಣಿ ಸಂಖ್ಯೆ 08256-237611 ಅಥವಾ 236133ನ್ನು ಸಂಪರ್ಕಿಸಬಹುದು ಎಂದು ಆಸ್ಪತ್ರೆಯ ಕಾರ್ಯನಿರ್ವಾಹಣಾಧಿಕಾರಿ ಎನ್. ಮನ್ಮಥ್ ಕುಮಾರ್ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.