Medical Camps
ಉಜಿರೆಯ ಎಸ್.ಡಿ.ಎಂ. ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಹಳೆಪೇಟೆ ಶಾಲೆಯಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ
ಉಜಿರೆ:(ಜ.26) ಎಸ್.ಡಿ.ಎಂ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಉಜಿರೆ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ,ಪರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳೆಪೇಟೆ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಂಟಿನಿ ಇವರ ಸಹಯೋಗದಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣೆ ಶಿಬಿರ ಹಳೆಪೇಟೆಯ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಚಾಲನೆ ನೀಡಲಾಯಿತು. ಬಳಿಕ ಮಾತನಾಡಿದ ಲಕ್ಷ್ಮಿ ಇಂಡಸ್ಟ್ರೀಸ್ ಕನಸಿನ ಮನೆ ಮಾಲೀಕ ಹಾಗೂ ಬದುಕು ಕಟ್ಟೋಣ ಬನ್ನಿ ಸಂಚಾಲಕರಾಗಿರುವ ಕೆ. ಮೋಹನ್ ಕುಮಾರ್, ಎಸ್ ಡಿ ಎಂ ಆಸ್ಪತ್ರೆ ಈ ಭಾಗದಲ್ಲಿ ಉತ್ತಮ ರೀತಿಯಲ್ಲಿ ಜನರ ಸೇವೆ ಮಾಡುತ್ತಿದೆ. ಪೂಜ್ಯ ಖಾವಂದರು ಜನವರಿ 1 ರಿಂದ ಉಚಿತ ಡಯಾಲಿಸಿಸ್ ಘೋಷಣೆ ಮಾಡಿದ್ದಾರೆ.
ಎಸ್.ಡಿ.ಎಂ ಆಸ್ಪತ್ರೆಯಿಂದ ಮಾತ್ರ ಇಂತಹ ಸೇವೆ ಮಾಡಲು ಸಾಧ್ಯ ಎಂದು ಹೇಳಿದರು. ಜನಾರ್ಧನ್ ಅವರು ಎಸ್ ಡಿ ಎಂ ಆಸ್ಪತ್ರೆಯ ಮುಖ್ಯಸ್ಥರಾಗಿ ಬಂದ ಮೇಲೆ ಆಸ್ಪತ್ರೆಯಲ್ಲಿ ಅನೇಕ ಬದಲಾವಣೆ ಆಗಿದೆ. ಉತ್ತಮ ಸೇವೆ ಕೂಡ ನೀಡುತ್ತಿದ್ದಾರೆ ಅಂದರು. ಈಗೀನ ಕಾಲದಲ್ಲಿ ಆರೋಗ್ಯ ಏನಾಗುತ್ತೆ ಅನ್ನೋದು ಗೊತ್ತಾಗಲ್ಲ, ಹೀಗಾಗಿ ಆರೋಗ್ಯ ತಪಾಸಣೆ ಅತೀ ಮುಖ್ಯ. ಹಳ್ಳಿ ಹಳ್ಳಿಗಳಿಗೆ ತೆರಳಿ ಎಸ್.ಡಿ.ಎಂ ಆಸ್ಪತ್ರೆ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸುತ್ತಿದೆ. ಇದೊಂದು ಉತ್ತಮ ಕಾರ್ಯ ಎಂದರು. ಬಳಿಕ ಮಾತನಾಡಿದ, ಬೆಳ್ತಂಗಡಿ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಅನಂತ್ ಭಟ್ ಮಚ್ಚಿಮಲೆ, ಮಂಗಳೂರಿನ ಯಾವುದೇ ಆಸ್ಪತ್ರೆಗೆ ಹೋಲಿಕೆ ಮಾಡಿದರೆ ಇಲ್ಲಿನ ಎಲ್ಲ ಸೇವೆಗಳಿಗೆ ದುಡ್ಡು ಕಡಿಮೆ, ನನ್ನ ಸಂಬಂಧಿಕರ ಶಸ್ತ್ರ ಚಿಕಿತ್ಸೆ ಮಂಗಳೂರಿಗೆ ಹೋಲಿಸಿದರೆ ಅರ್ಧಕರ್ಧ ಕಡಿಮೆ ಬೆಲೆಗೆ ಆಗಿದೆ ಎಂದರು. ಜನಾರ್ದನ್ ಅವರು ಅಧಿಕಾರ ಪಡೆದುಕೊಂಡ ಬಳಿಕ ಆಸ್ಪತ್ರೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ.
ಇತ್ತೀಚಿಗೆ ನಾನು ಒಂದು ರೋಗಿಯನ್ನು ರಾತ್ರಿ 10 ಗಂಟೆಗೆ ಕರೆದುಕೊಂಡು ಹೋಗಿದ್ದೆ, ಆಗ ಅಲ್ಲಿನ ಸಿಬ್ಬಂದಿ ಪ್ರೀತಿಯಿಂದಲೇ ನಮ್ಮನ್ನು ಸ್ವಾಗತಿಸಿದರು, ತಕ್ಷಣ ಪ್ರತಿಕ್ರಿಯೆ ನೀಡಿದರು. ಇದು ಶ್ಲಾಘನೀಯ ಎಂದರು. ಅನೇಕ ಆಸ್ಪತ್ರೆಗಳು ದುಡ್ಡಿನ ಮುಖ ನೋಡುತ್ತವೆ ಆದರೆ ಎಸ್.ಡಿ.ಎಂ ಆಸ್ಪತ್ರೆ ಸೇವೆಯ ಜನಮನ್ನಣೆಗೆ ಪಾತ್ರವಾಗಿದೆ ಎಂದರು.
ಬಳಿಕ ಮಾತನಾಡಿದ ಎಸ್.ಡಿ.ಎಂ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಎಂ. ಜನಾರ್ದನ್, ಸಾಮಾನ್ಯವಾಗಿ ಏನಾದರೂ ಕೆಲಸ ಮಾಡುವಾಗ ಲಾಭದ ಉದ್ದೇಶದಿಂದ ಮಾಡುತ್ತಾರೆ ಆದರೆ ಪೂಜ್ಯ ಖಾವಂದರು ಹಾಗಲ್ಲ, ಸೇವಾ ಮನೋಭಾವ ಇಟ್ಟುಕೊಂಡು ಈ ಆಸ್ಪತ್ರೆ ಸ್ಥಾಪಿಸಿ ಈಗ ಸೇವೆ ಮಾಡುತ್ತಿದ್ದಾರೆ, ಬಡವರಿಗೆ ಏನಾದರೂ ಲಾಭ ಆಗಬೇಕು ಅನ್ನುವ ದೃಷ್ಟಿ ಎಂದ ಮಾಡುತ್ತಾರೆ. ಉಚಿತ ಡಯಾಲಿಸಿಸ್ ನೀಡುವ ಮೂಲಕ ದೊಡ್ಡ ಸೇವೆಯನ್ನು ರೋಗಿಗಳಿಗೆ ನೀಡಿದ್ದಾರೆ, ಇಂತಹ ಸೇವೆ ಖಂಡಿತಾ ಪೂಜ್ಯ ಖಾವಂದರಿಂದ ಮಾತ್ರ ಸಾಧ್ಯ ಎಂದರು.
ನಮ್ಮ ಎಲ್ಲ ಸಿಬ್ಬಂದಿಗಳು ಒಳ್ಳೆ ಕೆಲಸ ಮಾಡುತ್ತಿದ್ದಾರೆ ನಿಮ್ಮ ಸೇವೆಗೆ ಸದಾ ಸಿದ್ಧರಿರುತ್ತಾರೆ ಎಂದರು. ಇವತ್ತಿನ ಉಚಿತ ತಪಾಸಣಾ ಶಿಬಿರಕ್ಕೆ ನಮ್ಮ ಆಸ್ಪತ್ರೆಯ ಎಲ್ಲ ಪ್ರಮುಖ ವೈದ್ಯರುಗಳು ಬಂದಿದ್ದಾರೆ ಇಲ್ಲಿಗೆ ಇದರ ಸದುಪಯೋಗ ಪಡೆದುಕೊಳ್ಳಿ ಎಂದರು. ಈ ವೇಳೆ ಹಳೆ ಪೇಟೆ ಶಾಲೆ ಮುಖ್ಯೋಪಾಧ್ಯಾಯರಾದ ಸಾವಿತ್ರಿ, ಹಳೆಪೇಟೆ ಜುಮ್ಮ ಮಸೀದಿ ಜೊತೆ ಕಾರ್ಯದರ್ಶಿ ಯು.ಕೆ. ಹನೀಫ್ , ಕುಂಟಿನಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಮೊಹಮ್ಮದ್ ಇರ್ಫಾನ್, ಕುಂಟಿನಿ ಶಾಲೆ ಮುಖ್ಯೋಪಾಧ್ಯಾಯರಾದ ಮೋಹಿನಿ, ಹಳೆ ಪೇಟೆ ಶಾಲೆ ಎಸ್.ಡಿ.ಎಂ.ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಅಬ್ದುಲ್ ಖಾದರ್ ಮತ್ತಿತರು ಉಪಸ್ಥಿತರಿದ್ದರು.

Medical Camps
Related News