Medical Camps
ಆಗಸ್ಟ್ 06 2023 ರಂದು ಉಜಿರೆ ಎಸ್ .ಡಿ .ಎಂ .ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ನ ಆಶ್ರಯದಲ್ಲಿ ಉಚಿತ ಆರೋಗ್ಯತಪಾಸಣಾ ಶಿಬಿರ
ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಉಜಿರೆ ವಲಯ ಇದರ ಸಹಕಾರದೊಂದಿಗೆ ಉಜಿರೆ ಎಸ್ .ಡಿ .ಎಂ .ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಇದರ ಆಶ್ರಯದಲ್ಲಿ ತಜ್ಞ ವೈದ್ಯರಿಂದ ಆ.6 ಉಜಿರೆ ಶಾರದ ಕಲ್ಯಾಣ ಮಂಟಪದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಜನಾರ್ದನ ದೇವಸ್ಥಾನ ಉಜಿರೆಯ ಅನುವಂಶಿಕ ಆಡಳಿತ ಮೊತ್ತೇಸರರಾದ ಶರತ್ ಕೃಷ್ಣ ಪಡ್ಡೆಟ್ನಾಯ ರವರು ನೆರವೇರಿಸಿ ಮನುಷ್ಯ ನೆಮ್ಮದಿಯಿಂದಿರಬೇಕಾದರೆ ಆರೋಗ್ಯ ಮುಖ್ಯ ಹಿಂದೆ ಅನಾರೋಗ್ಯ ಬಂದಾಗ ಆಸ್ಪತ್ರೆಗೆ ಹೋಗಿ ನೊಂದಾವಣೆ ಶುಲ್ಕ ಕಟ್ಟಿ ಚಿಕಿತ್ಸೆ ಪಡೆಯುತ್ತಿದ್ದು ಇದೀಗ ಇಂತಹ ಉಚಿತ ಶಿಬಿರಗಳಿಂದ ಜನರಿಗೆ ತುಂಬಾ ಪ್ರಯೋಜನವಾಗಿದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್ ಡಿ ಎಂ ಆಸ್ಪತ್ರೆ ಉಜಿರೆಯ ನಿರ್ದೇಶಕರಾದ ಎಂ ಜನಾರ್ದನ ರವರು ಮಾತನಾಡುತ್ತಾ ನಾವು ಕಾಯಿಲೆ ಬಂದಾಗ ಮಾತ್ರ ಆಸ್ಪತ್ರೆಗೆ ಹೋಗದೆ 3 ತಿಂಗಳಿಗೊಮ್ಮೆ ತಪಾಸಣೆ ಮಾಡಬೇಕು. ಪ್ರಥಮ ಹಂತದಲ್ಲಿಯೇ ಸರಿಯಾದ ಚಿಕಿತ್ಸೆಯನ್ನು ಪಡೆದಾಗ ಬೇಗ ಗುಣಮುಖರಾಗಲು ಸಾಧ್ಯ ಎಸ್ ಡಿ ಎಂ ಆಸ್ಪತ್ರೆ ಯಲ್ಲಿ ದೊರೆಯುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು.
ತಾಲೂಕಿನ ಗೌರವಾನಿತ ಯೋಜನಾಧಿಕಾರಿಯವರಾದ ಸುರೇಂದ್ರ ರವರು ಮಾತನಾಡುತ್ತಾ ಸಂಪೂರ್ಣ ಸುರಕ್ಷಾ ಮಾಡಿದ ಸದಸ್ಯರಿಗೆ ಎಸ್ ಡಿ ಎಂ ಆಸ್ಪತ್ರೆಯಲ್ಲಿ ದೊರೆಯುವ ಹೊರರೋಗಿ ಚಿಕಿತ್ಸೆಯ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪುಷ್ಪಾವತಿ ಆರ್ ಶೆಟ್ಟಿಯವರು ವಹಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ವೇದಿಕೆಯಲ್ಲಿ ಕಣ್ಣಿನ ವೈದ್ಯಾಧಿಕಾರಿಯವರಾದ ಸುಭಾಷ್ ಚಂದ್ರ ರವರು ಉಪಸ್ಥಿತರಿದ್ದರು. ಶಿಬಿರದಲ್ಲಿ ಬಿ.ಪಿ ಶುಗರ್ ಕಣ್ಣಿನ ತಪಾಸಣೆ ನರರೋಗ ತಪಾಸಣೆ ಇ.ಸಿ.ಜಿ. ಸೌಲಭ್ಯ ವಿದ್ದು ಸುಮಾರು 250 ಮಂದಿ ಭಾಗವಹಿಸಿ ಶಿಬಿರದ ಪ್ರಯೋಜನವನ್ನು ಪಡೆದಿದ್ದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.
ತಾಲೂಕಿನ ಜ್ಞಾನ ವಿಕಾಸ ಸಮನ್ವಯ ಅಧಿಕಾರಿಯವರಾದ ಮಧುರಾ ವಸಂತ್ ರವರು ನಿರೂಪಣೆ ಮಾಡಿದ ಈ ಕಾರ್ಯ ಕ್ರಮದಲ್ಲಿ ವಲಯ ಮೇಲ್ವಿಚಾರಕಿಯಾದ ಶ್ರೀಮತಿ ವನಿತಾರವರು ಭಾಗತಿಸಿ ಸೇವಾಪ್ರತಿನಿಧಿ ಪ್ರಮೀಳಾರವರು ಧನ್ಯವಾದ ನೀಡಿದರು. ವಲಯದ ಎಲ್ಲಾ ಸೇವಾಪ್ರತಿನಿಧಿಗಳು ಎಸ್ ಡಿ ಎಂ ಆಸ್ಪತ್ರೆಯ ಪದಾಧಿಕಾರಿಗಳ ವರ್ಗದವರು ಉಪಸ್ಥಿತರಿದ್ದರು

Medical Camps
Related News