Medical Camps
ಅಂತರಾಷ್ಟೀಯ ವಾಹನ ಚಾಲಕರ ದಿನಾಚರಣೆಯ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ
ಅಂತಾರಾಷ್ಟೀಯ ವಾಹನ ಚಾಲಕರ ದಿನಾಚರಣೆಯ ಪ್ರಯುಕ್ತ ಇಂಡಿಯನ್‍ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ಮಂಗಳೂರು ಹಾಗೂ ಪಿ.ಸಿ ಪೈ & ಕಂ ಉಜಿರೆ ಇವರ ಸಹಭಾಗಿತ್ವದಲ್ಲಿಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಏರ್ಪಡಿಸಿದ್ದರು.
ಸೆ.16 ರಂದು ನಡೆದ ಈ ಶಿಬಿರವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಪ್ರಭಾಶ್ ಕುಮಾರ್ ಉದ್ಘಾಟಿಸಿ ಮಾತನಾಡುತ್ತಾ, ಚಾಲಕರಿಗೆ ಮಹತ್ತರವಾದಜವಾಬ್ದಾರಿಯಿದೆ.ಕುಡಿದು ವಾಹನ ಚಲಾಯಿಸುವುದರಿಂದ ಆಗುವ ಅನಾಹುತಗಳ ಬಗ್ಗೆ ಚಾಲಕರು ಸದಾ ಎಚ್ಚರದಿಂದಇರಬೇಕೆಂದುತಿಳಿಹೇಳಿದರು.ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯ ಕಾರ್ಯನಿರ್ವಾಹಣಾಧಿಕಾರಿ ಶ್ರೀ ಎನ್. ಮನ್ಮಥ್ ಕುಮಾರ್ ಇವರು ಆಸ್ಪತ್ರೆಯಲ್ಲಿರುವ ವ್ಯವಸ್ಥೆ ಹಾಗೂ ಸೌಲಭ್ಯಗಳ ಮಾಹಿತಿ ನೀಡಿದರು.
ಇಂಡಿಯನ್‍ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ಮಂಗಳೂರು ಇದರ ಮಂಗಳೂರು ವಿಭಾಗದ ಸೇಲ್ಸ್ ಮೆನೇಜರ್ ಶ್ರೀ ವಾಮನ್ ಶೆಟ್ಟಿಗಾರ್,ಚಾಲಕರು ಮತ್ತು ಮಾಲಿಕರಿಗೆ ಕಂಪೆನಿಯಿಂದ ಸಿಗುವ ಸೌಲಭ್ಯಗಳ ಮಾಹಿತಿ ನೀಡಿದರು.ಮಂಗಳೂರು ವಿಭಾಗದಇಂಜಿನಿಯರ್ ಪ್ರಶಾಂತ್ ಉಪಸ್ಥಿತರಿದ್ದರು.
ಡಾ| ಕೃಷ್ಣ ವಾಸುದೇವ ಹಾಗೂ ಡಾ| ಮಮಿತ ಕುಮಾರಿ ಶಿಬಿರಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ಹಾಗೂ ಸೂಕ್ತ ಸಲಹೆ ನೀಡಿದರು.ಪಿ.ಸಿ ಪೈ & ಕಂ ಉಜಿರೆ ಇದರ ಮಾಲಕರಾದ ಶ್ರೀ ವಾಮನ್ ಪೈ ಸ್ವಾಗತಿಸಿ, ಧನ್ಯವಾದ ಅರ್ಪಿಸಿದರು, ಎಸ್.ಡಿ.ಎಂ ಸ್ನಾತಕೋತ್ತರಕಾಲೇಜಿನ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ಪುರಂದರ, ಶ್ರೀಮತಿ ಚೈತನ್ಯಾ, ಕುಮಾರಿ ರಮ್ಯಾ ಇವರು ಸಹಕರಿಸಿದರು.

