Contact Mobile: 91 77603 97878, Land: 08256-295611/ 615/616

Medical Camps

ಶಿವರಾತ್ರಿ ಪಾದಯಾತ್ರಿಗಳಿಗೆ ಉಚಿತ ವೈದ್ಯಕೀಯ ಸೇವೆ ಚಾರ್ಮಾಡಿ, ಸತ್ಯನ್ಪಲ್ಕೆ ಶಿಬಿರಗಳ ಉದ್ಘಾಟನೆ

ಶಿವರಾತ್ರಿ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುವ ಸಾವಿರಾರು ಪಾದಯಾತ್ರಿಗಳಿಗೆ ಪೂಜ್ಯ ಹೆಗ್ಗಡೆಯವರ ಆದೇಶದಂತೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಫೆ.25ರಿಂದ ಉಚಿತ ವೈದ್ಯಕೀಯ ಸೇವೆಯನ್ನು ಪ್ರಾರಂಭಿಸಲಾಯಿತು.
ಚಾರ್ಮಾಡಿ ಶಿಬಿರಕ್ಕೆ ಇಲ್ಲಿಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಕೃಷ್ಣರಾವ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಸತ್ಯನ್‍ಪಲ್ಕೆ ಶಿಬಿರವನ್ನು ಕಲ್ಮಂಜ ಪಂಚಾಯತ್ ಅಧ್ಯಕ್ಷರಾದ ಶ್ರೀಧರ್ ಎಂ ಉದ್ಘಾಟಿಸಿದರು. ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ನಿರ್ದೇಶಕ ಎಂ. ಜನಾರ್ದನ್, ವೈದ್ಯಕೀಯ ಅಧೀಕ್ಷಕ ಡಾ| ರಂಜನ್ ಕುಮಾರ್, ಡಾ| ಜಸ್ಟಿನ್, ನರ್ಸಿಂಗ್ ಅಧೀಕ್ಷಕಿ ಶೆರ್ಲಿ, ಮೇಲ್ವಿಚಾರಕ ರವೀಂದ್ರ ಗುಡಿಗಾರ್, ಎಸ್.ಕೆ.ಡಿ.ಆರ್.ಡಿ.ಪಿ ಯೋಜನಾಧಿಕಾರಿ ಜಯಕರ್ ಶೆಟ್ಟಿ, ಮಧುಕರ ಕಕ್ಕಿಂಜೆ ಸಿ.ಎ ಬ್ಯಾಂಕ್ ಮೆನೇಜರ್, ಪಂಚಾಯತ್ ಸದಸ್ಯೆ ಶಾರದಾ, ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಪ್ರಕಾಶ್. ಯೋಜನೆಯ ಮೇಲ್ವಿಚಾರಕ ಹರಿಪ್ರಸಾದ್ ಊರಿನ ಗಣ್ಯರಾದ ಕುಮಾರನಾಥ ಶೆಟ್ಟಿ, ರಾಘವ ಕಲ್ಮಂಜ, ಶ್ರೀನಿವಾಸ್, ದಿನೇಶ್ ಗೌಡ ಉಪಸ್ಥಿತರಿದ್ದರು.
ಬೆಂಗಳೂರು, ತುಮಕೂರು, ಬೀದರ್ ಮುಂತಾದ ದೂರದ ಊರಿನಿಂದ ಕಾಲ್ನಡಿಗೆಯಲ್ಲಿ ಬರುವ ಯಾತ್ರಾರ್ಥಿಗಳು ಚಾರ್ಮಾಡಿಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಇದೇ ದೇವಸ್ಥಾನದ ಬಳಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯ ವತಿಯಿಂದ ವೈದ್ಯಕೀಯ ಶಿಬಿರದ ವ್ಯವಸ್ಥೆ ಮಾಡಿ ಅಗತ್ಯವಿರುವ ಔಷಧಿ, ಮುಲಾಮು, ಸ್ಪ್ರೇ ಬ್ಯಾಂಡೇಜ್ ಇತ್ಯಾದಿಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ.
ಚಾರ್ಮಾಡಿ ಸೇರಿದಂತೆ ಸತ್ಯನಪಲ್ಕೆ, ಧರ್ಮಸ್ಥಳ, ಬೂಡುಜಾಲು, ಎಸ್.ಡಿ.ಎಂ ಡಿಎಡ್ ಕಾಲೇಜು ಇಲ್ಲಿ ಪಾದಯಾತ್ರಿಗಳಿಗೆ ಆರೋಗ್ಯ ಶಿಬಿರ ನಡೆಸಲು ವ್ಯವಸ್ಥೆ ಮಾಡಲಾಗಿದೆ. ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಪಾದಯಾತ್ರಿಗಳಿಗೆ ಆರೋಗ್ಯ ಸೇವೆ ನೀಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

Medical Camps

Related News

Related Events