News and Events
ವೈದ್ಯಕೀಯ ಜಾಗೃತಿ ಶಿಬಿರ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ಸಂಯುಕ್ತ ಆಶ್ರಯದಲ್ಲಿ ಕನ್ಯಾಡಿ ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಬದನಾಜೆ ಶಾಲೆಯಲ್ಲಿ ಡಿ. 12ರಂದು ವೈದ್ಯಕೀಯಜಾಗೃತಿ ಶಿಬಿರ ನಡೆಯಿತು.
ಕಾರ್ಯಕ್ರಮವನ್ನುಎಸ್.ಡಿ.ಎಂಆಸ್ಪತ್ರೆಯ ನಿರ್ದೇಶಕರಾದ ಎಂ.ಜನಾರ್ದನ್ ಉದ್ಘಾಟಿಸಿ ಮಾತನಾಡುತ್ತಾ, ಉಜಿರೆಎಸ್.ಡಿ.ಎಂಆಸ್ಪತ್ರೆಯಲ್ಲಿ ಪೂಜ್ಯ ಹೆಗ್ಗಡೆಯವರ ಆಶಯ ಮತ್ತುಆದೇಶದಂತೆ ಅತ್ಯಾಧುನಿಕ ತಂತ್ರಜ್ಞಾನವಿರುವ ವೈದ್ಯಕೀಯ ಸೇವಾ ಸೌಲಭ್ಯಗಳೊಂದಿಗೆ ತಜ್ಞ ವೈದ್ಯರ ತಂಡ ಉತ್ತಮ ವೈದ್ಯಕೀಯ ಸೇವೆ ನೀಡುತ್ತಿದೆಎಂದರು.
ಉಜಿರೆ ಎಸ್.ಡಿ.ಎಂಆಸ್ಪತ್ರೆಯ ವೈದ್ಯರಾದಡಾ| ಜ್ಯೋತಿಸ್ ಮರಿಯಾಇವರುಆರೋಗ್ಯ ನಿರ್ವಹಣೆ, ರೋಗಗಳು ಮತ್ತು ಚಿಕಿತ್ಸೆಗಳ ಬಗ್ಗೆ ಮಾಹಿತಿ ನೀಡಿದರು.ರೋಗಿಗಳಆರೈಕೆ ಮತ್ತು ಸಮನ್ವಯಅಧಿಕಾರಿ ಹೇಮಾವತಿ. ಐ ಉಜಿರೆ ಎಸ್.ಡಿ.ಎಂಆಸ್ಪತ್ರೆಯಲ್ಲಿ ಲಭ್ಯವಿರುವ ವೈದ್ಯರು ಮತ್ತು ವೈದ್ಯಕೀಯ ಸೇವಾ ಸೌಲಭ್ಯಗಳ ಮಾಹಿತಿ ನೀಡಿದರು.ವೈದ್ಯಕೀಯ ಸಂಬಂಧಿತ ವಿವಿಧ ಆರೋಗ್ಯ ಸವಿಮಾ ಸೌಲಭ್ಯಗಳ ಬಗ್ಗೆ ಇನ್ಶ್ಯೂರೆನ್ಸ್ ವಿಭಾಗದ ಜಗನ್ನಾಥ ಶೆಟ್ಟಿ ಮಾಹಿತಿ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ವಲಯ ಮೇಲ್ವಿಚಾರಕಿ ಅಶ್ವಿತಾ, ಬದನಾಜೆ ಒಕ್ಕೂಟದ ಅಧ್ಯಕ್ಷರಾದ ಬಾಬಣ್ಣ, ಕನ್ಯಾಡಿ ಒಕ್ಕೂಟದ ಅಧ್ಯಕ್ಷರಾದ ಸುಂದರಗೌಡ, ವಲಯ ಅಧ್ಯಕ್ಷರಾದ ಉಮರ್, ಬದನಾಜೆಒಕ್ಕೂಟದ ಸೇವಾ ಪ್ರತಿನಿಧಿ ಹೇಮಲತಾ, ಉಜಿರೆ ಎಸ್.ಡಿ.ಎಂಆಸ್ಪತ್ರೆಯ ಪರ್ಚೇಸ್ ಮ್ಯಾನೇಜರ್ ಅಜಯ್ಕುಮಾರ್, ಮಾರ್ಕೆಟಿಂಗ್ಎಕ್ಷಿಕ್ಯೂಟಿವ್ ಸುಮಂತ್ರೈ, ಉಪಸ್ಥಿತರಿದ್ದರು.
