News and Events
ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ: ಪ್ರಸೂತಿ ಪರಿಚಾರಕರಿಗೆ ಮಾನ್ಯತಾ ತರಬೇತಿ
ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಪ್ರಸೂತಿ ವಿಭಾಗದ ದಾದಿಯರು ಮತ್ತು ಸಿಬ್ಬಂದಿಗಳಿಗೆ ಮುಂ¨ಯಿಯ ಇಂಡಚೆಮಿ ಹೆಲ್ತ್ ಸ್ಪೆಷಲ್ಟೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯವರು ವಿಶ್ವ ಆರೋಗ್ಯ ಸಂಸ್ಥೆಯ ಮಾನ್ಯತಾ ಮಾರ್ಗಸೂಚಿಯಂತೆ ಪ್ರಸವಪೂರ್ವ ಮತ್ತು ಪ್ರಸವ ನಂತರದ ಆರೈಕೆಯ ಉತ್ತಮ ಗುಣಮಟ್ಟದ ವೈದ್ಯಕೀಯ ಸೌಲಭ್ಯ ನೀಡುವ ಕುರಿತು 5 ದಿನಗಳ ತರಬೇತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಪ್ರಸೂತಿ ವಿಭಾಗದ ಗುಣಮಟ್ಟ, ಗರ್ಭಿಣಿಯರ ಆರೋಗ್ಯದ ಪೂರ್ವಭಾವಿ ಮೌಲ್ಯಮಾಪನೆ, ಪ್ರಸವಕ್ಕೆ ಬೇಕಾಗುವ ಸಿದ್ಧತೆ, ಜನನ ಪರಿಚಾರಕರಿಗೆ ಸುರಕ್ಷಿತವಾದ ಪ್ರಸವ ಮಾಡಿಸಲು ಬೇಕಾಗುವ ಕೌಶಲ್ಯ ಮತ್ತು ವಿಶೇಷ ಜ್ಞಾನ, ಪ್ರಸವ ನಂತರದ ರಕ್ತಸ್ರಾವ ಗುರುತಿಸುವುದು ಮತ್ತು ನಿರ್ವಹಿಸುವುದು. ನವಜಾತ ಶಿಶುಗಳ ಆರೈಕೆ, ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸುವ ವಿಧಾನಗಳ ಜ್ಞಾನ, ಕ್ಲಿಷ್ಟಕರವಾದ ಮತ್ತು ತುರ್ತು ಸಂದರ್ಭದ ನಿರ್ವಹಣೆ, ಹೆರಿಗೆಯ ಸಂದರ್ಭದಲ್ಲಿ ಉಂಟಾಗುವ ತೊಡಕುಗಳು ಮತ್ತು ಅದನ್ನು ಯಶಸ್ವಿಯಾಗಿ ನಿರ್ವಹಿಸುವ ವಿಧಾನಗಳ ಬಗ್ಗೆ ವಿಶೇಷವಾದ ತರಬೇತಿಯನ್ನು ಈ ಶಿಬಿರದಲ್ಲಿ ನೀಡಲಾಯಿತು.
ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು, ಡಾ| ಹೇಮಾವತಿ ವಿ. ಹೆಗ್ಗಡೆಯವರು ಮತ್ತು ಡಿ. ಹರ್ಷೇಂದ್ರ ಕುಮಾರ್ ಇವರ ವಿಶೇಷ ಕಾಳಜಿಯಲ್ಲಿ ಬಾಣಂತಿ ಮತ್ತು ನವಜಾತ ಶಿಶುಗಳ ಆರೈಕೆಗಾಗಿ ಪ್ರತ್ಯೇಕವಾದ “ಅಮ್ಮ ಬರ್ತ್ ಸೆಂಟರ್” ಎಂಬ ವಿಶೇಷ ವಾರ್ಡ್ ಶೀಘ್ರದಲ್ಲಿ ತೆರೆಂiÀiಲಾಗುವುದು. ಈ ಉದ್ದೇಶದಿಂದ ಇಲ್ಲಿನ ಪ್ರಸೂತಿ ತಜ್ಞರು ಮತ್ತು ದಾದಿಯರಿಗೆ ಈ ತರಬೇತಿಯಿಂದ ಅನುಕೂಲವಾಗಲಿದೆ ಎಂದು ಆಸ್ಪತ್ರೆಯ ನಿರ್ದೇಶಕ ಎಂ. ಜನಾರ್ದನ್ ತಿಳಿಸಿದರು.
ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸುಸಜ್ಜಿತ ಹೆರಿಗೆ ಕೊಠಡಿ, ಇಬ್ಬರು ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು ಹಾಗೂ ಮಕ್ಕಳ ರೋಗ ತಜ್ಞರು ಲಭ್ಯವಿದ್ದು, ಇಲ್ಲಿ ಪ್ರತಿದಿನ ಮಿತದರದಲ್ಲಿ ಹಲವಾರು ಸುರಕ್ಷಿತ ಹೆರಿಗೆ ನಡೆಸಲಾಗುತ್ತಿದೆ. ಗರ್ಭಿಣಿಯರು, ಬಾಣಂತಿಯರು ಮತ್ತು ನವಜಾತ ಶಿಶುಗಳಿಗೆ ಅತ್ಯುತ್ತಮ ವೈದ್ಯಕೀಯ ಸೇವೆ ನೀಡಲಾಗುತ್ತಿದೆ.
ಅನೇಕ ಸಂದರ್ಭಗಳಲ್ಲಿ ಬಾಣಂತಿ ಮತ್ತು ನವಜಾತ ಶಿಶುಗಳಿಗೆ ವಿಶೇಷ ಆರೈಕೆಯ ಅಗತ್ಯವಿರುತ್ತದೆ. ಬಾಣಂತಿ ಮತ್ತು ನವಜಾತ ಶಿಶುಗಳಿಗೆ ಸೋಂಕು ತಗಲುವ ಸಾಧ್ಯತೆ ಅತೀ ಹೆಚ್ಚು ಇರುವ ಕಾರಣಕ್ಕಾಗಿ ಪ್ರತ್ಯೇಕವಾದ ಸುಸಜ್ಜಿತ ಮತ್ತು ವಿಶೇಷ ಸೌಲಭ್ಯಗಳನ್ನು ಒಳಗೊಂಡಿರುವ 8 ಸ್ಪೆಷಲ್ ವಾರ್ಡ್ ಹಾಗೂ ಸಾಮಾನ್ಯ ವಾರ್ಡ್ ತೆರೆಯಲಾಗುತ್ತದೆ.
“ಅಮ್ಮ ಬರ್ತ್ ಸೆಂಟರ್”ನಲ್ಲಿ ಟಿವಿ, ಎಸಿ, ಸುಸಜ್ಜಿತ ಬೆಡ್, ಡೈನಿಂಗ್ ಟೇಬಲ್, ಪರದೆಗಳು, ಅಟ್ಯಾಚ್ಡ್ ಬಾತ್ ರೂಮ್, ಸಾಮಾನ್ಯ ಹೆರಿಗೆಯಾದರೆ ಒಂದು ತಿಂಗಳ ಉಚಿತ ಔಷಧ, ರೋಗಿಯ ಸಹಾಯಕರಿಗೆ ಸೋಫಾ, ಮಗುವಿಗೆ ತೊಟ್ಟಿಲು ಮುಂತಾದ ವಿಶೇಷ ಸೌಲಭ್ಯಗಳು, ರಿಯಾಯಿತಿ ದರದಲ್ಲಿ ಬಾಣಂತಿ ಮತ್ತು ಮಗುವಿಗೆ ವೈದ್ಯಕೀಯ ಸೇವೆ ದೊರೆಯಲಿದೆ ಎಂದು ಅವರು ತಿಳಿಸಿದರು.







