News and Events
ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಕಣ್ಣಿನ ಶಸ್ತ್ರಚಿಕಿತ್ಸಾ ಕೊಠಡಿ ಉದ್ಘಾಟನೆ
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ ಈಗಾಗಲೇ ಹಲವಾರು ಕಣ್ಣಿನ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ರೋಗಿಗಳಿಗೆ ಅತ್ಯಾಧುನಿಕ ವೈದ್ಯಕೀಯ ಸೇವೆ ನೀಡುವ ಉದ್ದೇಶದಿಂದ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ನೂತನ ಕಣ್ಣಿನ ಶಸ್ತ್ರಚಿಕಿತ್ಸಾ ಕೊಠಡಿಯನ್ನು ವೈದ್ಯಾಧಿಕಾರಿ ಡಾ| ಸಾತ್ವಿಕ್ ಜೈನ್ ಸೆ.28ರಂದು ಉದ್ಘಾಟಿಸಿದರು.
ಎಸ್.ಡಿ.ಎಂ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಪ್ರಸ್ತುತ ಇರುವ ಹೊರರೋಗಿ ವಿಭಾಗಗಳಲ್ಲಿ ಸ್ಥಳವಕಾಶದ ಕೊರತೆ ಇರುವುದರಿಂದ ಹಾಗೂ ರೋಗಿಗಳಿಗೆ ಇನ್ನು ಶೀಘ್ರವಾಗಿ ಮತ್ತು ಅತ್ಯುತ್ತಮ ವೈದ್ಯಕೀಯ ಸೇವೆ ನೀಡುವ ಉದ್ದೇಶದಿಂದ ನೂತನವಾಗಿ 6 ಹೊರರೋಗಿ ವಿಭಾಗಗಳನ್ನು ತೆರೆಯಲಾಗಿದೆ ಎಂದು ಡಾ| ಸಾತ್ವಿಕ್ ಜೈನ್ ಹೇಳಿದರು.
ಆಸ್ಪತ್ರೆಯ ನಿರ್ದೇಶಕ ಎಂ ಜನಾರ್ದನ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲಿರುವ ಭಕ್ತಿ, ಪೂಜ್ಯ ಹೆಗ್ಗಡೆಯವರ ಮೇಲಿರುವ ಪ್ರೀತಿ ಮತ್ತು ಅಭಿಮಾನ, ನಮ್ಮ ಆಸ್ಪತ್ರೆಯ ವಿಶ್ವಸಾರ್ಹ ಸೇವೆಗಳಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ನಮ್ಮ ಆಸ್ಪತ್ರೆಗೆ ಬರುತ್ತಿದ್ದಾರೆ. ಅವರ ಅನುಕೂಲಕ್ಕಾಗಿ ಪೂಜ್ಯ ಹೆಗ್ಗಡೆಯವರ ನಿರ್ದೇಶನದಂತೆ ಆರೋಗ್ಯ ಸೇವೆಯನ್ನು ವಿಸ್ತರಿಸುವ ಉದ್ದೇಶದಿಂದ ಕೆಲವೊಂದು ವಿನೂತನ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ದೇವೇಂದ್ರ ಕುಮಾರ್. ಪಿ, ಸ್ತ್ರೀರೋಗ ತಜ್ಞೆ ಡಾ| ಸ್ವರ್ಣಲತಾ, ಶಸ್ತ್ರಚಿಕಿತ್ಸಾ ತಜ್ಞ ಡಾ| ಮಲ್ಲಕಾರ್ಜುನ್, ಕಣ್ಣಿನ ತಜ್ಞ ಡಾ| ಸುಭಾಶ್ಚಂದ್ರ, ಫಿಸಿಷಿಯನ್ ಡಾ| ಯಶಸ್ವಿನಿ, ಡಾ| ಶುೃತಿ, ಪೆಥಲಾಜಿಸ್ಟ್ ಡಾ| ತೇಜಶ್ವಿನಿ. ಬಿ ಕೋಟ್ಯಾನ್, ಸಹಾಯಕ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು