Contact Mobile: 91 77603 97878, Land: 08256-295611/ 615/616

News and Events

ಮಂಗಳೂರಿನ ಎಸ್.ಡಿ.ಎಂ ಕಣ್ಣಿನ ಆಸ್ಪತ್ರೆಯಲ್ಲಿ ಆಧುನಿಕ ಉಪಕರಣಗಳ ಲೋಕಾರ್ಪಣೆ

ಮಂಗಳೂರಿನ ಎಸ್.ಡಿ.ಎಂ ಕಣ್ಣಿನ ಆಸ್ಪತ್ರೆಯಲ್ಲಿ 25 ವರ್ಷಗಳ ಸಾರ್ಥಕ ಸೇವೆಯ ಸಂದರ್ಭದಲ್ಲಿ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಅಭಿಲಾಷೆಯಂತೆ ಎಲ್ಲಾ ವರ್ಗದ ಕಣ್ಣಿನ ರೋಗಿಗಳಿಗೆ ಗುಣಮಟ್ಟದ ಮತ್ತು ಪರಿಣಾಮಕಾರಿ ಚಿಕಿತ್ಸಾ ಸೌಲಭ್ಯ ದೊರೆಯುವಂತೆ ಮಾಡುವ ಉದ್ದೇಶದಿಂದ ಸುಮಾರು 1.25 ಕೋಟಿ ರೂಪಾಯಿ ವೆಚ್ಚದಲ್ಲಿ 3 ಅತ್ಯಾಧುನಿಕ ಯಂತ್ರಗಳನ್ನು ಲೋಕಾರ್ಪಣೆ ಮಾಡಲಾಯಿತು.
ಕಣ್ಣಿನ ಅಕ್ಷಿಪಟಲದ (ರೆಟಿನ) ಸ್ಕ್ಯಾನ್ ಮಾಡುವ ಅತ್ಯಾಧುನಿಕ ಓ.ಸಿ.ಟಿ (ಔಅಖಿ) ಯಂತ್ರ. ಕಣ್ಣಿನ ಅಕ್ಷಿಪಟಲ, ವಿಟ್ಟ್ರಿಯಸ್, ಲೆನ್ಸ್ ವಿವರ, ಕಣ್ಣು ಗುಡ್ಡೆ ಇವುಗಳನ್ನು ಅಲ್ಟ್ರಾಸೌಂಡ್ ಮುಖಾಂತರ ತಪಾಸಣೆ ಮಾಡುವ ಬಿ-ಸ್ಕ್ಯಾನ್ (ಃ-Sಛಿಚಿಟಿ) (ಇಕೋ ವ್ಯೂ ಬಯೋಮೆಡಿಕ್ಸ್ ) ಯಂತ್ರ ಮತ್ತು ರೆಟಿನ ಹಾಗೂ ವಿಟ್ರಿಯಸ್ ಸರ್ಜರಿ ಮಾಡಲು ಉಪಯೋಗಿಸುವ ಅತ್ಯಾಧುನಿಕ ವಿಟ್ರೆಕ್ಟಮಿ ಯಂತ್ರಗಳನ್ನು ಏ. 20ರಂದು ಡಿ. ರಾಜೇಂದ್ರ ಕುಮಾರ್, ಮ್ಯಾನೇಜಿಂಗ್ ಡೈರೆಕ್ಟರ್, ಅಟೋಮ್ಯಾಟ್ರಿಕ್ಸ್, ಮಂಗಳೂರು ಇವರು ಲೋಕಾರ್ಪಣೆ ಮಾಡಿ ಕಣ್ಣಿನ ಸಮಸ್ಯೆ ಇರುವವರು ಈ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಎಸ್.ಡಿ.ಎಂ ಮೆಡಿಕಲ್ ಟ್ರಸ್ಟ್‍ನ ಟ್ರಸ್ಟಿ ಡಾ. ಟಿ.ಎನ್.ಶೆಟ್ಟಿ ಹಾಗೂ ಮೂಡಾದ ಅಧ್ಯಕ್ಷರಾದ ಸುರೇಶ್ ಬಲ್ಲಾಳ್ ಶುಭ ಹಾರೈಸಿದರು.
ಡಾ. ರಶ್ಮಿ ಶೆಟ್ಟಿ ಹಾಗೂ ಡಾ. ನಮಿತ್ ಡಿಸೋಜಾ ಇವರು ಲೋಕಾರ್ಪಣೆಗೊಂಡ ಅತ್ಯಾಧುನಿಕ ಯಂತ್ರಗಳ ಉಪಯೋಗ ಮತ್ತು ಅವುಗಳಲ್ಲಿರುವ ತಂತ್ರಜ್ಞಾನದ ಮಾಹಿತಿ ನೀಡಿದರು.
ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ಕಾರ್ಯನಿರ್ವಾಹಣಾಧಿಕಾರಿ ಎನ್. ಮನ್ಮಥ್ ಕುಮಾರ್ ಸ್ವಾಗತಿಸಿ, ಟ್ರಸ್ಟಿನ ಕಾರ್ಯದರ್ಶಿ ಶಿಶುಪಾಲ್ ಪೂವಣಿ ಧನ್ಯವಾದ ಅರ್ಪಿಸಿದರು. ಎಸ್.ಡಿ.ಎಂ ಕಣ್ಣಿನ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಶಶಿಕಲಾ ರಾವ್, ಡಾ. ಅಶುತೋಶ್ ಬೋಳೂರು, ವ್ಯವಸ್ಥಾಪಕರಾದ ಶಿವಾನಂದ್, ಮೆಡಿಕಲ್ ಟ್ರಸ್ಟಿನ ಅಕೌಂಟೆಂಟ್ ಬಿ.ಪಿ ವಜ್ರನಾಭಯ್ಯ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

News and Events

Related News