News and Events
ಉಜಿರೆ ಎಸ್.ಡಿ.ಎಂ ಆಸ್ಪತ್ರೆಗೆ ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳ ಭೇಟಿ
ಬೆಂಗಳೂರು ಕ್ಷಯರೋಗ ಜಂಟಿ ನಿರ್ದೇಶಕರ ಕಚೇರಿಯ ಉಪನಿರ್ದೇಶಕರಾದ ಡಾ| ಅನಿಲ್, ಜಿಲ್ಲಾ ಕ್ಷಯ ನಿಯಂತ್ರಣಾಧಿಕಾರಿ ಡಾ| ಬದ್ರುದ್ದೀನ್, ವಿಶ್ವ ಆರೋಗ್ಯ ಸಂಸ್ಥೆಯ ಕನ್ಸಲ್ಟಿಂಗ್ ವೈದ್ಯರಾದ ಡಾ| ದೇವಿಗನ್, ಡಾ| ಸ್ಪೂರ್ತಿ ಗೌಡ ಇವರು ಉಜಿರೆಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತೆಗೆ ಇತ್ತೀಚೆಗೆ ಭೇಟಿ ನೀಡಿದರು.
ಆಸ್ಪತ್ರೆಯ ಔಷಧಾಲಯ, ಪ್ರಯೋಗಾಲಯ ಮತ್ತು ವೈದ್ಯರನ್ನು ಭೇಟಿ ಮಾಡಿ ಚರ್ಚಿಸಿದರು. ಆಸ್ಪತ್ರೆಯಲ್ಲಿ ಕ್ಷಯರೋಗಿಗಳ ದಾಖಲೆಗಳ ನಿರ್ವಹಣೆ ಮತ್ತು ರೋಗಿಗಳ ಚಿಕಿತ್ಸೆಯ ವ್ಯವಸ್ಥೆಗಳನ್ನು ಪರಿಶೀಲಿಸಿ ಮೆಚ್ಚುಗೆ ಸೂಚಿಸಿದರು.
ಜಿಲ್ಲಾ ಕ್ಷಯ ನಿಯಂತ್ರಣಾಧಿಕಾರಿಯವರ ಆದೇಶದಂತೆ ರಾಷ್ಟ್ರೀಯ ಕ್ಷಯ ನಿರ್ಮೂಲನ ಕಾರ್ಯಕ್ರಮದ ಪ್ರಯುಕ್ತ ಉಜಿರೆಯ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಕ್ಷಯ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅನೇಕ ಕ್ಷಯರೋಗಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಎಂ. ಕಾಶೀನಾಥ ಶೆಣೈ ತಿಳಿಸಿದರು. ಆಸ್ಪತ್ರೆಯ ಡಾ| ಸಾತ್ವಿಕ್ ಜೈನ್, ಡಾ| ಸಂದೀಪ್ ಉಪಸ್ಥಿತರಿದ್ದರು.