News and Events
ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ: ವೈದ್ಯಕೀಯ ಸಲಕರಣೆಗಳ ಶುದ್ಧೀಕರಣಕ್ಕೆ ಹೊಸ ಇಟಿಓ ಯಂತ್ರ
ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸಲಕರಣೆಗಳ ಶುದ್ಧೀಕರಣಕ್ಕೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನಿರ್ದೇಶನದಂತೆ ಸೆಂಟ್ರಲ್ ಸ್ಟೆರೈಲ್ ಸಪ್ಲೈ ಡಿಪಾರ್ಟ್ಮೆಂಟ್ನಲ್ಲಿ 125 ಲೀಟರ್ ಸಾಮಥ್ರ್ಯದ 6 ಲಕ್ಷ ರೂಪಾಯಿ ಮೌಲ್ಯದ ಅತ್ಯಂತ ಪರಿಣಾಮಕಾರಿ ಹೊಸ ಎಥಿಲೀನ್ ಆಕ್ಸೈಡ್ ಯಂತ್ರವನ್ನು ಅಳವಡಿಸಲಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕರಾದ ಎಂ. ಜನಾರ್ದನ್ ಹೇಳಿದರು.
ಈ ಯಂತ್ರವು ಕಡಿಮೆ ತಾಪಮಾನದ ಅನಿಲ ಪ್ರಕ್ರಿಯೆಯಾಗಿದ್ದು, ಏಕಬಳಕೆಯ ವೈದ್ಯಕೀಯ ಸಾಧನಗಳ ಕ್ರಿಮಿನಾಶಕಗೊಳಿಸಲು ಇದನ್ನು ಬಳಸಲಾಗುತ್ತದೆ. ಕಡಿಮೆ ಸಮಯದಲ್ಲಿ ಕಡಿಮೆ ತಾಪಮಾನದಲ್ಲಿ ಅತ್ಯಂತ ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ವೈದ್ಯಕೀಯ ಸಲಕರಣೆಗಳನ್ನು ಮರುಬಳಕೆ ಮಾಡಲು ಸಾಧ್ಯವಾಗುವುದರಿಂದ ರೋಗಿಗಳಿಗೆ ಮಿತದರದಲ್ಲಿ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ. ರೋಗಿಗಳ ಹಿತದೃಷ್ಟಿಯಿಂದ ಈ ಹೊಸ ಇಟಿಓ ಯಂತ್ರ ಅಳವಡಿಸಲಾಗದೆ ಎಂದು ಅವರು ತಿಳಿಸಿದರು.