News and Events
ಉಜಿರೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ದಶಮಾನೋತ್ಸವದ ಪತ್ರಿಕಾಗೋಷ್ಟಿ
ಉಜಿರೆ: ಹಳ್ಳಿಯ ಜನರ ಆರೋಗ್ಯ ರಕ್ಷಣೆ ಗೋಸ್ಕರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಉಜಿರೆಯಲ್ಲಿ ಆರಂಭಿಸಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹತ್ತು ವರ್ಷಗಳನ್ನು ಪೂರೈಸಿದ್ದು, ಇದೀಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗುವ ಎಲ್ಲಾ ಅರ್ಹತೆಗಳೊಂದಿಗೆ ಹಂತ ಹಂತವಾಗಿ ಬೆಳೆದು ಜನಸಾಮಾನ್ಯರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದು ಆಸ್ಪತ್ರೆಯ ಎಂ.ಡಿ.ಜನಾರ್ದನ್ ಹಾಗೂ ವೈದ್ಯಾಧಿಕಾರಿ ಡಾ.ಸಾತ್ವಿಕ್ ಜೈನ್ ಹೇಳಿದರು.
ಅವರು 24/06/2023 ರಂದು ಆಸ್ಪತ್ರೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಳೆದ ಒಂದೂವರೆ ವರ್ಷಗಳ ಹಿಂದೆ ಆರಂಭವಾದ ಡಯಾಲಿಸಿಸ್ ಸೆಂಟರ್ ನಲ್ಲಿ 5,000 ಕ್ಕಿಂತ ಅಧಿಕ ಮಂದಿ ಚಿಕಿತ್ಸೆ ಪಡೆದಿದ್ದಾರೆ. ಕಳದ ಹತ್ತು ವರ್ಷಗಳಲ್ಲಿ 6.50 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಚಿಕಿತ್ಸೆ ಪಡೆದಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಎಸ್.ಜೆ.ಡಿ.ಆರ್.ಡಿ.ಪಿ ವತಿಯಿಂದ 22.51 ಕೋಟಿ ರೂ.ಗೂ ಅಧಿಕ ವಚ್ಚದಲ್ಲಿ ಉಚಿತ ಚಿಕಿತ್ಸೆ ನೀಡಲಾಗಿದೆ ಎಂದರು.
ಸಿಟಿ ಸ್ಕ್ಯಾನ್ ಹೊಂದಿರುವ ತಾಲೂಕಿನ ಏಕೈಕ ಆಸ್ಪತ್ರೆಯಾಗಿದ್ದು, ಕ್ಯಾನ್ಸರ್ ಚಿಕಿತ್ಸೆಗೆ ಯೆನೆಪೋಯ ಆಸ್ಪತ್ರೆಯೊಂದಿಗೆ ಅತಿ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ, ಗ್ರಾಮೀಣ ಪ್ರದೇಶದ ಗಳಲ್ಲಿ 500ಕ್ಕೂ ಹೆಚ್ಚಿನ ಉಚಿತ ವೈದ್ಯಕೀಯ ಶಿಬಿರಗಳನ್ನು ಏರ್ಪಡಿಸಿ ಅಲ್ಲಿನ ಜನರಿಗೆ ಅನುಕೂಲ ನೀಡಲಾಗಿದೆ. ಕೋವಿಡ್ ಸಂದರ್ಭ ಒಂದು ಕೋಟಿ ರೂ.ನಷ್ಟು ಮೊತ್ತವನ್ನು ಜನಹಿತ ಕಾರ್ಯಗಳಿಗೆ ಉಪಯೋಗಿಸಲಾಗಿದೆ ಎಂದರು.
ಮುಂದಿನ ಯೋಜನೆಗಳು:
ದಶಮಾನೋತ್ಸವ ವರ್ಷದಲ್ಲಿರುವ ಆಸ್ಪತ್ರೆಯಲ್ಲಿ ಮುಂದಿನ ದಿನಗಳಲ್ಲಿ
- ಚೈಲ್ಡ್ ಅಂಡ್ ಮದರ್ ಕೇರ್ ವಿಭಾಗ
- ಸುಮಾರು 6 ರಿಂದ 7 ಕೋಟಿ ರೂಪಾಯಿ ಖರ್ಚಿನಲ್ಲಿ ಆರಂಭಗೊಳ್ಳಲಿದೆ ಹೃದಯ ರೋಗಳಿಗಾಗಿ ಕ್ಯಾಥ್ ಲ್ಯಾಬ್ ಆರಂಭವಾಗಲಿದೆ.
ವಿಶೇಷತೆಗಳು:
- ಸ್ವಚ್ಛತೆಗೆ ವಿಶೇಷ ಒತ್ತು ನೀಡುತ್ತಿರುವ ಆಸ್ಪತ್ರೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ 2017ರಲ್ಲಿ ಜಿಲ್ಲಾಮಟ್ಟದ ಪರಿಸರ ಪ್ರಶಸ್ತಿ.
- ಹೃದ್ರೋಗಿಗಳಿಗೆ ಕಾರ್ಡಿಯಾಕ್ ಅಂಬುಲೆನ್ಸ್ ವ್ಯವಸ್ಥೆ
- 2019ರ ಪ್ರವಾಹ ಸಂದರ್ಭ ತಾಲೂಕಿನ ನೆರೆ ಸಂತ್ರಸ್ತರಿಗೆ ಉಚಿತ ಆರೋಗ್ಯ ತಪಾಸಣೆ ಔಷಧಿ ವಿತರಣೆ
- ಪರಿಸರ ಸಂರಕ್ಷಣೆಗೆ ಒತ್ತು ನೀಡುವ ನಿಟ್ಟಿನಲ್ಲಿ ಪೇಪರ್ ರಹಿತ ಡಿಜಿಟಲ್ ಎಂ.ಆರ್.ಡಿ.
- ಒಂದನೇ ಮಹಡಿಯಲ್ಲಿ 6 ಹೊರರೋಗಿ ವಿಭಾಗ
- ಮಂಗಳೂರಿನ ಆಸ್ಪತ್ರೆಗಳಿಗೆ ಅಲೆದಾಡುವ ಸಂಕಷ್ಟ ನಿವಾರಣೆಗಾಗಿ ಇಎಸ್ ಐ ಡಿಸ್ಪೆನ್ಸರಿ
- ಕೀ ಹೋಲ್, ಕಿಡ್ನಿ ಸ್ಟೋನ್ ಸರ್ಜರಿ, ಗರ್ಭಕೋಶದ ಗೆಡ್ಡೆಯ ಶಸ್ತ್ರ ಚಿಕಿತ್ಸೆ
- ಸಂಪೂರ್ಣ ಮಂಡಿ ಬದಲಿ ಜೋಡಣೆ ಚಿಕಿತ್ಸೆ ಹಾಗೂ ಇನ್ನಿತರ ಸರ್ಜರಿ ಸೌಲಭ್ಯಗಳು ಲಭ್ಯ ಎಂದರು.
ಲೆಕ್ಕ ಪತ್ರ ವಿಭಾಗದ ನಾರಾಯಣ ಭಂಡಾರಿ ಸ್ವಾಗತಿಸಿ ವಂದಿಸಿದರು.