News and Events
ನಮ್ಮ ಪ್ರತಿಯೊಂದು ಕಾರ್ಯವು ಮಾನವನ ಒಳಿತಿಗಾಗಿ ಇರಬೇಕು ಎಂ. ಜನಾರ್ದನ್ ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಸಿಬ್ಬಂದಿಗಳಿಗೆ ನಾಯಕತ್ವ ತರಬೇತಿ
ಮನುಷ್ಯನ ಜೀವನವು ಆರಾಮ, ಆರೋಗ್ಯ, ಆನಂದ ಎಂಬ 3 ಉದ್ದೇಶಗಳನ್ನು ಹೊಂದಿದೆ. ನಾವು ಮಾಡುವ ಪ್ರತಿಯೊಂದು ಕಾರ್ಯವು ಇತರರ ಈ 3 ಉದ್ದೇಶಗಳನ್ನು ಪೂರೈಸುವಂತಿರಬೇಕು. ಆಸ್ಪತ್ರೆಗೆ ಬರುವ ರೋಗಿಗಳಿಗೆ ನಮ್ಮ ಸೇವೆಯಿಂದ ಆರಾಮ, ಆರೋಗ್ಯ, ಆನಂದದ ಅನುಭವ ಲಭಿಸಿದಾಗ ನಾವು ಮಾಡುವ ಕೆಲಸ ಅಥವಾ ಸೇವೆ ಪರಿಪೂರ್ಣವಾಗುತ್ತದೆ ಎಂದು ಎಂ. ಜನಾರ್ದನ್ ಹೇಳಿದರು.
ಭಾರತ ಸರಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ಭಾರತದ ವಾಣಿಜೋದ್ಯಮ ಸಂಸ್ಥೆಯಿಂದ ಪ್ರಮಾಣೀಕೃತ ತರಬೇತುದಾರರಾಗಿರುವ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕರೂ ಆಗಿರುವ ಎಂ. ಜನಾರ್ದನ್ ಇವರು ಈ ಆಸ್ಪತ್ರೆಯ ಎಲ್ಲಾ ವಿಭಾಗದ ಮುಖ್ಯಸ್ಥರಿಗೆ ಡಿ. 30ರಂದು ಆಯೋಜಿಸಿದ್ದ ನಾಯಕತ್ವ ತರಬೇತಿ “ಬೆಟರ್-ಟು-ಬೆಸ್ಟ್” ಕಾರ್ಯಾಗಾರದಲ್ಲಿ ನಾಯಕತ್ವವನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ತನ್ನ ವ್ಯಕ್ತಿತ್ವವನ್ನು ತಾನೇ ಬೆಳೆಸಿಕೊಂಡು, ಇತರರ ಯೋಗಕ್ಷೇಮವನ್ನು ಕಾಪಾಡಿಕೊಳ್ಳುವ ವಿಧಾನಗಳ ಬಗ್ಗೆ ತಿಳಿಸುತ್ತಾ, ಶ್ರೇಷ್ಠ ಮನಸ್ಥಿತಿಯ ವ್ಯಕ್ತಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಚರ್ಚಿಸುತ್ತಾನೆ, ಮಧ್ಯಮ ಮನಸ್ಥಿತಿಯ ವ್ಯಕ್ತಿ ಕೇವಲ ಸಮಸ್ಯೆಯ ಬಗ್ಗೆ ಮಾತನಾಡುತ್ತಾನೆ. ಸಣ್ಣ ಮನಸ್ಥಿತಿಯ ವ್ಯಕ್ತಿ ಘಟನೆಗೆ ಕಾರಣವಾದ ವ್ಯಕ್ತಿಯನ್ನು ದೂಷಿಸುವುರಲ್ಲಿಯೇ ಮಗ್ನನಾಗುತ್ತಾನೆ ಎಂದರು.
ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಎಲ್ಲಾ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಮಾನವ ಸಂಪನ್ಮೂಲ ಅಧಿಕಾರಿ ಸೌಮ್ಯ ಎನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.