News and Events
ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಹೊಸ ವರ್ಷಾಚರಣೆ
ವರ್ಷ ಕಳೆದಂತೆ ವಯಸ್ಸಾದಂತೆ ನಮ್ಮಲ್ಲಿ ಹುರುಪು ಉಲ್ಲಾಸವೂ ಹೆಚ್ಚಾಗಬೇಕು. ಹೊಸ ವರ್ಷ ಹೊಸ ಹುರುಪು ಉಲ್ಲಾಸ ತರಲಿ ಎಂದು ಪ್ರೊಫೆಸರ್ ಪ್ರಭಾಕರ್ ಸರ್ ಅವರು ಸಿಬ್ಬಂದಿಗಳಿಗೆ ಶುಭ ಹಾರೈಸಿದರು. ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ 2022ರ ಹೊಸ ವರ್ಷಾಚರಣೆ ವೇಳೆ ದೀಪ ಬೆಳಗಿಸಿ ಮಾತನಾಡಿದ ಅವರು ನೂತನ ವರ್ಷದಲ್ಲಿ ಎಲ್ಲರಿಗೂ ಶುಭವಾಗಲಿ ಎಂದರು.
ವೈದ್ಯಕೀಯ ಅಧೀಕ್ಷಕ ಡಾII.ರಂಜನ್ ಕುಮಾರ್ ಹೊಸ ವರ್ಷದ ಶುಭ ಹಾರೈಸಿದರು. ಆಸ್ಪತ್ರೆಯ ವೈದ್ಯರು, ದಾದಿಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಆಸ್ಪತ್ರೆಯ ನಿರ್ದೇಶಕ ಎಂ ಜನಾರ್ಧನ್ ರವರು, ಹೊಸ ವರ್ಷದ ಶುಭ ಹಾರೈಸಿದರು. ಹೊಸವರ್ಷದಲ್ಲಿ ಅನಾರೋಗ್ಯ ಪೀಡಿತರು ಬೇಗ ಗುಣಮುಖರಾಗಿ ಆರೋಗ್ಯ ಜೀವನ ನಡೆಸುವಂತಾಗಲಿ. ಎಲ್ಲರಿಗೂ 2022 ಸಂತೋಷದಾಯಕವಾಗಿರಲಿ ಎಂದರು.
2022ರ ವರ್ಷದಲ್ಲಿ ಜನರ ಬದುಕು ಸುಖಮಯವಾಗಿರಲಿ. ಎಲ್ಲರೂ ಆರೋಗ್ಯಯುತ ಜೀವನ ನಡೆಸುವಂತಾಗಲಿ ಎಂದು ಡಾ| ಸಾತ್ವಿಕ್ ಹೇಳಿದರು. ಅವರು ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಹೊಸ ವರ್ಷಾಚರಣೆ ವೇಳೆ ದೀಪ ಬೆಳಗಿಸಿ ಮಾತನಾಡುತ್ತಾ, ಎಲ್ಲರಿಗೂ ಶುಭ ಹಾರೈಸಿದರು.
ಆಸ್ಪತ್ರೆಯ ಸಿಬ್ಬಂದಿಗಳ ತಂಡ ಹೂವಿನ ಎಸಳುಗಳಿಂದ ರಂಗೋಲಿ ರಚಿಸಿದ್ದರು. ಆಸ್ಪತ್ರೆಯ ವೈದ್ಯರು, ದಾದಿಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.