News and Events
ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ದಿನಾಂಕ 29 ಡಿಸೆಂಬರ್ 2021 ರಂದು ಪ್ರಥಮಚಿಕಿತ್ಸೆ ಹಾಗೂ ಪುನರುಜ್ಜೀವನ ತರಬೇತಿ ಬಗ್ಗೆ ಬೆಳ್ತಂಗಡಿ ಟ್ರಾಫಿಕ್ ಪೊಲೀಸರಿಗೆ ತಿಳುವಳಿಕೆಯ ಮಾಹಿತಿ
ಪ್ರತಿಯೊಬ್ಬರಿಗೂ ಪ್ರಥಮಚಿಕಿತ್ಸೆ ಹಾಗೂ ತುರ್ತುಚಿಕಿತ್ಸೆ ಬಗ್ಗೆ ಪ್ರಾಥಮಿಕ ತಿಳಿವಳಿಕೆ ಇದ್ದಲ್ಲಿ ಹೆಚ್ಚಿನ ಅಪಾಯದಿಂದ ಪಾರಾಗಿ, ಆರೋಗ್ಯವನ್ನು ಕಾಪಾಡಬಹುದು ಎಂದು ಬೆಳ್ತಂಗಡಿ ಟ್ರಾಫಿಕ್ ಪೊಲೀಸ್ ಸಬ್ಇನ್ಸ್ಪೆಕ್ಟರ್ ಶ್ರೀಮಾನ್ಯ ಓಡಿಯಪ್ಪ ಗೌಡ ಹೇಳಿದರು . ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾII.ರಂಜನ್ ಕುಮಾರ್ ಪ್ರಥಮ ಚಿಕಿತ್ಸೆಯ ವಿವಿಧ ಮಜಲುಗಳನ್ನು ವಿವರಿಸಿದರು. ಆಸ್ಪತ್ರೆಯ ನಿರ್ದೇಶಕ ಎಂ ಜನಾರ್ಧನ್ ರವರು, ಆಸ್ಪತ್ರೆಯಲ್ಲಿ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಡಾII. ಯಶಸ್ವಿನಿ ಮೋಹನ್ ಅಮೀನ್, ಡಾII.ತೇಜಸ್ವಿನಿ, ಡಾII. ಚಿನ್ಮಯ್, ನರ್ಸಿಂಗ್ ಅಧೀಕ್ಷಕಿ ಶೆರ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು. ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಮತಿ ಸಂಗೀತ ಅರವಿಂದ ಕಾರ್ಯಕ್ರಮ ನಿರೂಪಿಸಿದರು.