News and Events
ಸತ್ಯನ್ಪಲ್ಕೆ: ಪಾದಯಾತ್ರಿಗಳಿಗೆ ವೈದ್ಯಕೀಯ ಸೇವೆ
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುವ ಪಾದಯಾತ್ರಿಗಳಿಗೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯ ವತಿಯಿಂದ ಕಲ್ಮಂಜ ಗ್ರಾಮದ ಸತ್ಯನ್ಪಲ್ಕೆಯಲ್ಲಿ ವೈದ್ಯಕೀಯ ಶಿಬಿರವನ್ನು ಪ್ರಾರಂಭಿಸಲಾಯಿತು.
ಸ್ಥಳೀಯ ಜನಪ್ರತಿನಿಧಿಗಳಾದ ಕೃಷ್ಣಮೂರ್ತಿ ಹೆಬ್ಬಾರ್, ಪ್ರವೀಣ್ ಗೌಡ, ಶ್ರೀನಿವಾಸ ರಾವ್, ಸಮಾಜ ಸೇವಕರಾದ ಆದಪ್ಪ ಗೌಡ, ಊರಿನ ಗಣ್ಯರಾದ ವಿಷ್ಣು ಪಟವರ್ಧನ್, ಯೋಗೀಶ್ ಪರೆಂಜಾಪೆ, ದಿನೇಶ್ ಎಂ.ಕೆ, ಆಸ್ಪತ್ರೆಯ ಶಿಶುಪಾಲ ಪೂವಣಿ ವೈದ್ಯರಾದ ಡಾ ಅನಿಶ ಹಾಗೂ ಅಣ್ಣಿ ಪೂಜಾರಿ ಉಪಸ್ಥಿತರಿದ್ದರು.
ಬೆಂಗಳೂರು, ತುಮಕೂರು, ಹಾಸನ ಮುಂತಾದ ಕಡೆಯಿಂದ ಕಾಲ್ನಡಿಗೆಯಲ್ಲಿ ಬರುವ ಯಾತ್ರಾರ್ಥಿಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೋಗಲು ಸತ್ಯನ್ಪಲ್ಕೆ ಮೂಲಕ ಹತ್ತಿರದ ದಾರಿಯಾಗಿರುವುದರಿಂದ ಈ ದಾರಿಯಲ್ಲಿ ತೆರಳುವ ಪಾದಯಾತ್ರಿಗಳ ಅನುಕೂಲಕ್ಕಾಗಿ ಸತ್ಯನ್ಪಲ್ಕೆಯಲ್ಲಿ ಶಿಬಿರ ಮಾಡಲಾಗಿದೆ.
ವರದಿ: ನಾರಾಯಣ. ಬಿ