Contact Mobile: 91 77603 97878, Land: 08256-295611/ 615/616

News and Events

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಉಜಿರೆ ಎಸ್.ಡಿ.ಎಂ ಆಸ್ಪತ್ರೆಗೆ ವೆಂಟಿಲೇಟರ್ ಕೊಡುಗೆ

ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ. ವೀರೇಂದ್ರ ಹೆಗ್ಗಡೆಯವರು ಕೋವಿಡ್ ಸೋಂಕಿತರಿಗೆ ವಿವಿಧ ರೀತಿಯಲ್ಲಿ ನೆರವು ನೀಡುತ್ತಿದ್ದಾರೆ. ಕೋವಿಡ್ ಸೋಂಕಿತರು ಚಿಕಿತ್ಸೆಗೆ ಹೋಗಿಬರಲು ಉಚಿತ ವಾಹನದ ವ್ಯವಸ್ಥೆ, ವಿವಿಧ ಆಸ್ಪತ್ರೆಗಳಿಗೆ ಆಕ್ಷಿಜನ್ ಹಾಗೂ ವೈದ್ಯಕೀಯ ಸಲಕರಣೆಗಳ ಕೊಡುಗೆ, ಕೋವಿಡ್ ಸೆಂಟರ್‍ನಲ್ಲಿ ಉಚಿತ ಊಟದ ವ್ಯವಸ್ಥೆ ಸೇರಿದಂತೆ ಸುಮಾರು 5 ಕೋಟಿ ರೂಪಾಯಿಯನ್ನು ಕೋವಿಡ್ ಸಂಬಂಧಿತ ಕಾರ್ಯಕ್ರಮಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ವ್ಯಯಿಸಲಾಗಿದೆ ಎಂದು ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್. ಹೆಚ್ ಮಂಜುನಾಥ್ ಹೇಳಿದರು.
ಅವರು ಉಜಿರೆ ಎಸ್.ಡಿ.ಎಂ ಆಸ್ಪತ್ರೆಗೆ ಪೂಜ್ಯ ಖಾವಂದರರ ಮಾರ್ಗದರ್ಶನದಂತೆ ಗ್ರಾಮಾಭಿವೃದ್ಧಿ ಯೋಜನೆಯಿಂದ ಉಚಿತವಾಗಿ ಎರಡು ವೆಂಟಿಲೇಟರ್ ಹಸ್ತಾಂತರಿಸುತ್ತಾ, ಉಜಿರೆ ಎಸ್.ಡಿ.ಎಂ ಆಸ್ಪತ್ರೆಯು ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿಗಳು ಸೇರಿದಂತೆ ಎಲ್ಲಾ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ಮೂಲಕ ಜನರ ವಿಶ್ವಾಸ ಗಳಿಸಿದೆ ಎಂದರು.
ಆಸ್ಪತ್ರೆಯ ನಿರ್ದೇಶಕರಾದ ಎಂ.ಜನಾರ್ಧನ್ ಸ್ವಾಗತಿಸಿ, ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸಂಗೀತ ಧನ್ಯವಾದ ಅರ್ಪಿಸಿದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷರಾದ ಡಾ| ರಂಜನ್ ಕುಮಾರ್, ವೈದ್ಯರುಗಳಾದ ಡಾ| ಸಾತ್ವಿಕ್ ಜೈನ್, ಡಾ| ತೇಜಸ್ವಿನಿ ಕೋಟ್ಯಾನ್ ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ಸಿ.ಓ.ಓ ಅನಿಲ್ ಕುಮಾರ್ ಎಸ್.ಎಸ್ ಉಪಸ್ಥಿತರಿದ್ದರು.
ವರದಿ: ನಾರಾಯಣ.ಬಿ

News and Events

Related News