News and Events
ಕೊರಿಂಜ: ಉಚಿತ ಆರೋಗ್ಯ ತಪಾಸಣಾ ಶಿಬಿರ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ, ಉಜಿರೆ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃದ್ಧಿ ಯೋಜನೆ (ರಿ.) ಕಣಿಯೂರು ವಲಯ, ಪ್ರಗತಿಬಂಧು, ಸ್ವ-ಸಹಾಯ ಸಂಘಗಳ ಒಕ್ಕೂಟ, ಕಣಿಯೂರು ವಲಯ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಣಿಯೂರು ವಲಯ, ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕೊರಿಂಜ, ಯುವವಾಹಿನಿ ಉಪ್ಪಿನಂಗಡಿ ಘಟಕ ಇವರ ಸಹಕಾರದೊಂದಿಗೆ ಫೆ.25 ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ರವರೆಗೆ ಕೊರಿಂಜ ಪಂಚಲಿಂಗೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ನಡೆಯಲಿದೆ.
ಶಿಬಿರದಲ್ಲಿ ಕಣ್ಣು ತಪಾಸಣೆ, ಹೃದಯ ತಪಾಸಣೆ, ಕಿ-ಮೂಗು ತಪಾಸಣೆ, ಮಕ್ಕಳ ರೋಗ ತಪಾಸಣೆ, ಸ್ತ್ರೀರೋಗ ತಪಾಸಣೆ, ಮೂಳೆ ತಪಾಸಣೆ ಹಾಗೂ ಜನರಲ್ ತಪಾಸಣೆ ನಡೆಸಲಾಗುವುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.