Contact Mobile: 91 77603 97878, Land: 08256-295611/ 615/616

News and Events

ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಹೊಸ ವರ್ಷಾಚರಣೆ

2020ರಲ್ಲಿ ಕೊರೊನಾ ತಂದೊಡ್ಡಿದ ಸಂಕಷ್ಟ ಜನಜೀವನವನ್ನೇ ಅಸ್ತವ್ಯಸ್ಥಗೊಳಿಸಿ ಹೋಯಿತು. 2021ರ ವರ್ಷದಲ್ಲಿ ಜನರ ಬದುಕು ಸುಖಮಯವಾಗಿರಲಿ. ಎಲ್ಲರೂ ಆರೋಗ್ಯಯುತ ಜೀವನ ನಡೆಸುವಂತಾಗಲಿ ಎಂದು ಡಾ| ಸಾತ್ವಿಕ್ ಹೇಳಿದರು. ಅವರು ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಹೊಸ ವರ್ಷಾಚರಣೆ ವೇಳೆ ದೀಪ ಬೆಳಗಿಸಿ ಮಾತನಾಡುತ್ತಾ, ಎಲ್ಲರಿಗೂ ಶುಭ ಹಾರೈಸಿದರು.
ಎಸ್.ಡಿ.ಎಂ ಮೆಡಿಕಲ್ ಟ್ರಸ್ಟ್ ಕಾರ್ಯದರ್ಶಿ ಶಿಶುಪಾಲ ಪೂವಣಿ ಮಾತನಾಡಿ, ಹೊಸವರ್ಷದಲ್ಲಿ ಅನಾರೋಗ್ಯ ಪೀಡಿತರು ಬೇಗ ಗುಣಮುಖರಾಗಿ ಆರೋಗ್ಯ ಜೀವನ ನಡೆಸುವಂತಾಗಲಿ. ಎಲ್ಲರಿಗೂ 2021 ಸಂತೋಷದಾಯಕವಾಗಿರಲಿ ಎಂದರು.
ಆಸ್ಪತ್ರೆಯ ಸಿಬ್ಬಂದಿಗಳ ತಂಡ ಹೂವಿನ ಎಸಳುಗಳಿಂದ ರಂಗೋಲಿ ರಚಿಸಿದ್ದರು. 2021ರ ಸಂಕೇತವಾಗಿ 21 ಹಣತೆಗಳನ್ನು ಹಚ್ಚಲಾಯಿತು. ಆಸ್ಪತ್ರೆಗೆ ಭೇಟಿ ನೀಡಿದ ರೋಗಿಗಳು ಹಾಗೂ ಸಹಾಯಕರು ಸುಂದರವಾಗಿ ರಚಿಸಲಾದ ರಂಗೋಲಿಯನ್ನು ಕಂಡು ಖುಷಿಯಿಂದ ಫೊಟೋ ಕ್ಲಿಕ್ಕಿಸಿಕೊಂಡರು.
ಆಸ್ಪತ್ರೆಯ ವೈದ್ಯರು, ದಾದಿಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ವರದಿ: ನಾರಾಯಣ. ಬಿ

News and Events

Related News