News and Events
ಎಸ್.ಡಿ.ಎಂ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ
ಮನುಷ್ಯನ ಮನಸ್ಸು ಮತ್ತು ರಕ್ತ ಶುದ್ಧವಾಗಿದ್ದರೆ ಆರೋಗ್ಯ ಚೆನ್ನಾಗಿರುತ್ತದೆ. ರಕ್ತದಾನ ಮಾಡುವುದರಿಂದ ರಕ್ತ ಶುದ್ಧಗೊಳ್ಳುವುದಲ್ಲದೆ ರಕ್ತದ ಮರುಉತ್ಪತ್ತಿ ಸಾಮಥ್ರ್ಯ ವೃದ್ಧಿಸುತ್ತದೆ ಎಂದು ಪ್ರೊ| ಎಸ್. ಪ್ರಭಾಕರ್ ಹೇಳಿದರು. ಅವರು ಸೆ.17 ರಂದು ಭೊರೂಕಾ ಪವರ್ ಕಾರ್ಪೋರೇಶನ್ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅಸ್ಪತ್ರೆ ಇವರ ಜಂಟಿ ಅಶ್ರಯದಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅಸ್ಪತ್ರೆಯಲ್ಲಿ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡುತ್ತಾ ರಕ್ತದಾನದ ಮಹತ್ವ ವಿವರಿಸಿದರು.
ಭೊರೂಕ ಸಂಸ್ಥೆಯ ಶ್ರೀಹರಿದಂಡು ಸ್ವಾಗತಿಸಿ ಗಣೇಶ್ ಶೆಟ್ಟಿ ಭೊರುಕ ಸಂಸ್ಥೆಯ ಕಿರುಪರಿಚಯ ಮಾಡಿದರು. ಆಸ್ಪತ್ರೆಯ ಆಡಳಿತಾಧಿಕಾರಿ ಶ್ರೀ ಮನ್ಮಥ್ ಕುಮಾರ್ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಉಜಿರೆಯ ಎಸ್.ಡಿ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಿಗುವ ಸೌಲಭ್ಯಗಳ ವಿವರ ನೀಡಿದರು. ಕರುಣಾಸಾಗರ್ ನಿರೂಪಿಸಿ ವೆಂಕಟೇಶ್ ವಂದಿಸಿದರು. ವೇದಿಕೆಯಲ್ಲಿ ಎಸ್.ಡಿ.ಎಂ ಮೆಡಿಕಲ್ ಟ್ರಸ್ಟ್‍ನ ಕಾರ್ಯದರ್ಶಿ ಎನ್.ಶಿಶುಪಾಲ್ ಪೂವಣಿ, ಪ್ರಸೂತಿ ತಜ್ಞೆ ಡಾ| ಸ್ವರ್ಣಲತಾ ಹಾಗೂ ಭೊರೂಕ ಸಂಸ್ಥೆಯ ಅಧಿಕಾರಿ ಗಣೇಶ್ ಶೆಟ್ಟಿ ಉಪಸ್ಥಿತರಿದ್ದರು. ಮಂಗಳೂರು ಕೆ.ಎಂ.ಸಿ ಯ ವೈದ್ಯಕೀಯ ತಂಡ ಪಾಲ್ಗೊಂಡ ರಕ್ತದಾನ ಶಿಬಿರದಲ್ಲಿ 119 ಮಂದಿ ಭಾಗವಹಿಸಿ ರಕ್ತದಾನ ಮಾಡಿದರು.