News and Events
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ದಶಮಾನೋತ್ಸವ ಆಚರಣೆ, ಆಸ್ಪತ್ರೆ ಸರ್ವಧರ್ಮೀಯರ ದೇವಾಲಯ: ಡಾ| ಹೆಗ್ಗಡೆ
ಉಜಿರೆ: ಜೂ. 30 2023 : ಮುನ್ನೂಚನೆ ಇಲ್ಲದೆ ಬರುವುದು ಕಾಯಿಲೆ ಮಾತ್ರ, ಸಮಾಜದ ಎಲ್ಲರ ಆರೋಗ್ಯ ರಕ್ಷಣೆಗೆ ಶ್ರಮಿಸುತ್ತಿರುವ ಆಸ್ಪತ್ರೆಗಳು ಸರ್ವಧರ್ಮಿಯರ ದೇವಾಲಯಗಳಾಗಿವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ನುಡಿದರು.
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾವೇಶ್ವರ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ದಶಮಾನೋತ್ಸವ ಆಚರಣೆಯ ಪ್ರಯುಕ್ತ ಆಸ್ಪತ್ರೆಯಲ್ಲಿ ಶುಕ್ರವಾರ ನಡೆದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಹಿಂದೆ ಲ್ಯಾಲದಲ್ಲಿದ್ದ ಎಸ್ಡಿಎಂ ಟಿ.ಬಿ. ಆಸ್ಪತ್ರೆಯಿಂದ ಪ್ರೇರಣೆ ಪಡೆದು ಗ್ರಾಮೀಣ ಜನರಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಉಜಿರೆಯಲ್ಲಿ ಆಸ್ಪತ್ರೆ ಸ್ಥಾಪಿಸಿದವು. ಪ್ರಸ್ತುತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗುವ ವರೆಗೆ ಸಾರ್ಥಕ 10 ವರ್ಷ ಪೂರೈಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಹೇಮಾವತಿ ವೀ. ಹೆಗ್ಗಡೆಯವರು ಶುಭಾಶಂಸನೆಗೈದು, ವೈದ್ಯರ ಮುಗುಳ್ಳಗುಭರಿತ ವಿಶ್ವಾಸ ಮತ್ತು ಸಾಂತ್ವನದ ಮಾತುಗಳು ರೋಗಿಗಳಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಮೂಡಿಸಿ ಶೀಘ್ರ ಗುಣಮುಖರಾಗುವಂತೆ ಮಾಡುತ್ತದೆ ಎಂದರು.
ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ ಡಾ| ಬಾಲಕೃಷ್ಣ ಭಟ್, ಡಾ| ಕಮಲಾ ಭಟ್, ನರ್ಸಿಂಗ್ ಅಧೀಕ್ಷಕಿ ಶೆರ್ಲಿ ಹಾಗೂ ನಿವೃತ್ತ ಕಾರ್ಯನಿರ್ವಾಹಕ ಅಧಿಕಾರಿ ಮನ್ಮಥ್ ಕುಮಾರ್ ಎನ್., ಎಸ್.ಡಿ.ಎಂ ಮೆಡಿಕಲ್ ಟ್ರಸ್ಟ್ ಕಾರ್ಯದರ್ಶಿ ಶಿಶುಪಾಲ ಪೂವಣಿ ಅವರನ್ನು ಸನ್ಮಾನಿಸಲಾಯಿತು. ಉತ್ತಮ ಸಿಬ್ಬಂದಿ ಎಂದು ಆಯ್ಕೆಯಾದ ನೇತ್ರಾ, ಸಂಧ್ಯಾ ಸಿ.ಪಿ., ಎನ್.ಎ. ಬಿ.ಹೆಚ್ ಸಲಹೆಗಾರರಾದ ರಂಜಿತಾ ಸಹಿತ ಆಸ್ಪತ್ರೆ ಆರಂಭದಿಂದ 10 ವರ್ಷ ಸೇವೆ ಸಲ್ಲಿಸಿದ 40 ಮಂದಿ ಸಿಬಂದಿಯನ್ನು ಗೌರವಿಸಲಾಯಿತು.
ಆಸ್ಪತ್ರೆಗೆ ದೊರೆತ ಎನ್.ಎ.ಬಿ.ಎಚ್ ಮಾನ್ಯತೆಯ ಪ್ರಮಾಣಪತ್ರವನ್ನು ಡಾ| ಹೆಗ್ಗಡೆ ಅನಾವರಣಗೊಳಿಸಿದರು.
ಧರ್ಮಸ್ಥಳದ ಡಿ ಹರ್ಷೇಂದ್ರ ಕುಮಾರ್, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್, ಮುಖ್ಯ ವೈದ್ಯಾಧಿಕಾರಿ ಡಾ| ಸಾತ್ವಿಕ್ ಜೈನ್ ಮತ್ತು ಎಸ್ .ಡಿ.ಎಂ ಐಟಿ ವಿಭಾಗದ ಸಿ.ಇ.ಒ ಪೂರಣ್ ವರ್ಮ ಉಪಸ್ಥಿತರಿದ್ದರು.
ಆಸ್ಪತ್ರೆಯ ನಿರ್ದೇಶಕರಾದ ಜನಾರ್ದನ್ ಎಂ. ಸ್ವಾಗತಿಸಿದರು. ಜಗನ್ನಾಥ ಮತ್ತು ಡಾ| ಮೀರಾ ಅನುಪಮ ಕಾರ್ಯಕ್ರಮ ನಿರ್ವಹಿಸಿದರು.