Contact Mobile: 91 77603 97878, Land: 08256-295611/ 615/616

News and Events

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗೆ ಸತತ 2ನೇ ಬಾರಿಗೆ ಸುರಕ್ಷಿತ ಹೆರಿಗೆಯನ್ನು ಖಾತ್ರಿಪಡಿಸುವ ಮಾನ್ಯತಾ ಪ್ರಮಾಣಪತ್ರ

ಭಾರತದ ಪ್ರಸೂತಿ ಮತ್ತು ಸ್ತಿçÃರೋಗ ಶಾಸ್ತçದ ವೈದ್ಯರನ್ನು ಪ್ರತಿನಿಧಿಸುವ ವೃತ್ತಿಪರ ಸಂಸ್ಥೆಯಾದ ಭಾರತದ ಪ್ರಸೂತಿ ಮತ್ತು ಸ್ತಿçÃರೋಗ ಶಾಸ್ತçದ ಸೊಸೈಟಿಗಳ ಒಕ್ಕೂಟ (ಈಔಉSI) ಸಂಸ್ಥೆಯಿAದ ಸುರಕ್ಷಿತ ಹೆರಿಗೆಯನ್ನು ಖಾತ್ರಿಪಡಿಸುವ ಗುಣಮಟ್ಟದ ಮಾನದಂಡ ಅನುಸರಿಸುತ್ತಿರುವ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗೆ ಸತತ ೨ನೇ ಬಾರಿ ಮಾನ್ಯತಾ ಪ್ರಮಾಣಪತ್ರ ದೊರೆತಿದೆ.
ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಪ್ರಸೂತಿ ವಿಭಾಗದ ಸಿಬ್ಬಂದಿ ವೈದ್ಯರ ಅನುಪಸ್ಥಿಯಲ್ಲಿ ತುರ್ತು ಸಂದರ್ಭದಲ್ಲಿ ಗರ್ಭಿಣಿಯ ಸುರಕ್ಷಿತ ಆರೈಕೆ ಮಾಡಲು ಇಲ್ಲಿನ ಪ್ರಸೂತಿ ಮತ್ತು ಸ್ತಿçÃರೋಗ ತಜ್ಞರಾದ ಡಾ| ಸ್ವರ್ಣಲತಾ ಮತ್ತು ಡಾ| ಪ್ರಿಯಾಂಕ ಜಯದೇವ್, ನರ್ಸಿಂಗ್ ಅಧೀಕ್ಷಕಿ ಶೆರ್ಲಿ ಇವರಿಂದÀ ವಿಶೇಷ ತರಬೇತಿ ಪಡೆದುಕೊಂಡಿದ್ದು, ಭಾರತದ ಪ್ರಸೂತಿ ಮತ್ತು ಸ್ತಿçÃರೋಗ ಶಾಸ್ತçದ ಸೊಸೈಟಿಗಳ ಒಕ್ಕೂಟ ನಡೆಸುವ ಪರೀಕ್ಷೆಯಲ್ಲಿ ೨೦ರಲ್ಲಿ ೧೯ ಅಂಕ ಪಡೆಯುವ ಮೂಲಕ ಮಾನ್ಯತಾ ಪ್ರಮಾಣಪತ್ರ ಪಡೆದುಕೊಂಡಿದೆ.
ಗರ್ಭಿಣಿ, ಬಾಣಂತಿ ಹಾಗೂ ಮಗುವಿನ ಸುರಕ್ಷತೆಗೆ ಹೆಚ್ಚಿನ ಆಧ್ಯತೆ ನೀಡುತ್ತಿರುವ ಆಸ್ಪತ್ರೆಗಳಿಗೆ ಈ ಪ್ರಮಾಣಪತ್ರ ನೀಡಲಾಗುತ್ತಿದೆ. ಮಾನ್ಯತಾ ಪ್ರಮಾಣಪತ್ರ ದೊರೆತ ಕರ್ನಾಟಕದ ಕೆಲವೇ ಕೆಲವು ಆಸ್ಪತ್ರೆಗಳಲ್ಲಿ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯು ಒಂದಾಗಿದೆ. ಸತತ ೨ನೇ ಬಾರಿ ಮಾನ್ಯತಾ ಪತ್ರ ಪಡೆಯುವಲ್ಲಿ ಯಶಸ್ವಿಯಾದ ಪ್ರಸೂತಿ ವಿಭಾಗದ ಸಿಬ್ಬಂದಿ ಮತ್ತು ನರ್ಸಿಂಗ್ ಅಧೀಕ್ಷಕಿ ಶೆರ್ಲಿ ಇವರ ಕಾರ್ಯವನ್ನು ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಡಾ. ಹೇಮಾವತಿ ವಿ. ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಇವರು ಶ್ಲಾಘಿಸಿದ್ದಾರೆ ಎಂದು ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ತಿಳಿಸಿದರು.
ಮುಂಬೈನ ಇಂಡ್‌ಕೆಮಿ ಹೆಲ್ತ್ ಸ್ಪೆಷಾಲಿಟಿ ಪ್ರೆöÊ.ಲಿ ಇದರ ಪ್ರಾದೇಶಿಕ ವ್ಯವಸ್ಥಾಪಕರಾದ ನರಸಿಂಹಮೂರ್ತಿ. ಎನ್ ಮಾನ್ಯತಾ ಪತ್ರವನ್ನು ಹಸ್ತಾಂತರಿಸಿದರು. ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್, ಪ್ರಸೂತಿ ಮತ್ತು ಸ್ತಿçÃರೋಗ ತಜ್ಞರಾದ ಡಾ| ಸ್ವರ್ಣಲತಾ ಮತ್ತು ಡಾ| ಪ್ರಿಯಾಂಕ ಜಯದೇವ್, ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್ ಪಿ, ನರ್ಸಿಂಗ್ ಅಧೀಕ್ಷಕಿ ಶೆರ್ಲಿ, ಪ್ರಸೂತಿ ವಿಭಾಗದ ನರ್ಸಿಂಗ್ ಸಿಬ್ಬಂದಿಗಳಾದ ಮರಿಯಮ್ಮ ಚಾಕೋ ಮತ್ತು ಸೆಲೆಸ್ಟಿನ್ ಜ್ಯೋತಿ ಉಪಸ್ಥಿತರಿದ್ದರು.

News and Events

Related News