News and Events
ಉಜಿರೆ ಎಸ್.ಡಿ.ಎಂ. ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗೆ ಧಾರವಾಡ ಎಸ್.ಡಿ.ಎಂ. ಯುನಿವರ್ಸಿಟಿ ಸಹ ಉಪಕುಲಪತಿ ಭೇಟಿ
ಉಜಿರೆ ಎಸ್.ಡಿ.ಎಂ. ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗೆ ಧಾರವಾಡದ ಎಸ್.ಡಿ.ಎಂ. ವಿಶ್ವವಿದ್ಯಾನಿಲಯದ ಸಹ ಉಪಕುಲಪತಿ (ಸಮಕುಲಾಧಿಪತಿ/ ಪ್ರೊ ವೈಸ್ ಚಾನ್ಸೆಲರ್) ಹಾಗೂ ಧಾರವಾಡ ಎಸ್.ಡಿ.ಎಂ. ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಜೀವಂಧರ್ ಕುಮಾರ್ ಅವರು ಅ.24ರಂದು ಭೇಟಿ ನೀಡಿದರು.
ಆಸ್ಪತ್ರೆಯ ಎಲ್ಲಾ ವಿಭಾಗ ಮುಖ್ಯಸ್ಥರನ್ನು ಉದ್ದೇಶಿಸಿ ಮಾತನಾಡಿದ ಅವರು, ನಾಯಕರು ಹೇಗಿರುತ್ತಾರೋ ಹಾಗೆಯೇ ಹಿಂಬಾಲಕರೂ ಇರುತ್ತಾರೆ. ಹೆಗ್ಗಡೆ ಅವರಂತಹ ಮಹಾನ್ ವ್ಯಕ್ತಿಯ ನಾಯಕತ್ವ ನಮಗಿರುವಾಗ ನಾವೇ ಅತ್ಯಂತ ಧನ್ಯರು ಎಂದರು.
“ಇಲ್ಲಿನ ವೈದ್ಯರಲ್ಲಿ, ಸಿಬ್ಬಂದಿಯಲ್ಲಿ ವಿಶೇಷವಾಗಿ ನಾನು ನಗುಮೊಗವನ್ನು ಕಾಣುತ್ತಿದ್ದೇನೆ. ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ, ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಅವರ ನಾಯಕತ್ವದಲ್ಲಿ ಆಸ್ಪತ್ರೆಯು ಬೆಳೆಯುತ್ತಿದೆ. ಪೂಜ್ಯರ ಮಹತ್ವಾಕಾಂಕ್ಷೆಗಳನ್ನು ಈಡೇರಿಸುತ್ತಿರುವ ನಿಮ್ಮೆಲ್ಲರಿಂದ ಈ ಆಸ್ಪತ್ರೆ ಮತ್ತಷ್ಟು ಬೆಳೆಯಲಿದೆ” ಎಂದರು.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಸ್ವಾಗತಿಸಿದರು. ಪೆಥಾಲಜಿಸ್ಟ್ ಡಾ| ಮೇಘಾ ಹಾಗೂ ಎಲ್ಲಾ ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು.













