News and Events
ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಯಶಸ್ವಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆ
ಉಜಿರೆ ಹಳೆಪೇಟೆಯ 63 ವರ್ಷ ಪ್ರಾಯದ ಎ. ರಾಜರಾಮ ನಾಯಕ್ ಎಂಬವರು ಮೊಣಕಾಲು ಸವೆತದಿಂದ ನಡೆದಾಡಲು ಕಷ್ಟಪಡುತ್ತಿದ್ದು, ಇವರಿಗೆ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಸೊಂಟ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಸೊಂಟದ ಕೀಳು ಬದಲಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಈ ಎರಡು ಶಸ್ತ್ರಚಿಕಿತ್ಸೆಗಳನ್ನು ಮೂಳೆ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಶತಾನಂದ ಪ್ರಸಾದ್ ರಾವ್ ಡಾ| ಹರೀಶ್ ಬಿ.ಎಸ್ ಹಾಗೂ ಅರೆವಳಿಕೆ ತಜ್ಞರಾದ ಡಾ| ಸುಪ್ರೀತ್ ಆರ್ ಶೆಟ್ಟಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯನ್ನು ನಿರ್ವಹಿಸಿದರು.
ಟೋಟಲ್ ನೀ ರಿಪ್ಲೇಸ್‍ಮೆಂಟ್ ಹಾಗೂ ಟೋಟಲ್ ಹಿಪ್ ರಿಪ್ಲೇಸ್‍ಮೆಂಟ್ ಒಂದು ಸಂಕೀರ್ಣ ಶಸ್ತ್ರಚಿಕಿತ್ಸೆಯಾಗಿದೆ. ಈ ಶಸ್ತ್ರಚಿಕಿತ್ಸೆಯಲ್ಲಿ ಕೃತಕ ಲೋಹದ ಕೀಲುಗಳನ್ನು ಅಳವಡಿಸಲಾಗುತ್ತದೆ. ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಈಗಾಗಲೇ ಹಲವಾರು ಟೋಟಲ್ ನೀ ರಿಪ್ಲೇಸ್‍ಮೆಂಟ್ ಟೋಟಲ್ ಹಿಪ್ ರಿಪ್ಲೇಸ್‍ಮೆಂಟ್ ಹಾಗೂ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ.
ನಗರ ಪ್ರದೇಶದ ಅಸ್ಪತ್ರೆಗಳಿಗೆ ಹೋಲಿಸಿದರೆ ಈ ಆಸ್ಪತ್ರೆಯಲ್ಲಿ ಅತ್ಯಂತ ಕಡಿಮೆ ದರದಲ್ಲಿ ಇಂತಹ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತಿದೆ. ಹೈಟೆಕ್ ಆಸ್ಪತ್ರೆಗಳಲ್ಲಿ ದೊರೆಯುವ ವೈದ್ಯಕೀಯ ಸೇವೆ ಹಾಗೂ ಸಂಕೀರ್ಣ ಶಸ್ತ್ರಚಿಕಿತ್ಸೆಗಳು ಗ್ರಾಮೀಣ ಜನತೆಗೆ ಮಿತದರದಲ್ಲಿ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದೊರೆಯುತ್ತಿರುವ ಬಗ್ಗೆ ಡಾ| ಡಿ. ವೀರೇಂದ್ರ ಹೆಗ್ಗಡೆ, ಮಾತೃಶ್ರೀ ಹೇಮಾವತಿ ಹೆಗ್ಗಡೆ ಹಾಗೂ ಹರ್ಷೇಂದ್ರ ಕುಮಾರ್ ಹರ್ಷ ವ್ಯಕ್ತಪಡಿಸಿದರು ಎಂದು ನಿರ್ದೇಶಕ ಎಂ. ಜನಾರ್ದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೋಗಿಗಳನ್ನು ಕುಟುಂಬದ ಸದಸ್ಯನಂತೆ ಇಲ್ಲಿನ ವೈದ್ಯರು ದಾದಿಯರು ಹಾಗೂ ಸಿಬ್ಬಂದಿಗಳು ನೋಡಿಕೊಳ್ಳುತ್ತಾರೆ. ಮೊಣಕಾಲು ನೋವಿನಿಂದ ಬಳಲುತ್ತಿದ್ದ ನನಗೆ ಇಲ್ಲಿ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಯನ್ನು ಕಡಿಮೆ ಖರ್ಚಿನಲ್ಲಿ ನಡೆಸಲಾಗಿದೆ. ಈಗ ಮೊದಲಿನಂತೆ ಆರಾಮವಾಗಿ ನಡೆದಾಡಲು ನನ್ನಿಂದ ಸಾಧ್ಯವಾಗಿದೆ. ಉಜಿರೆಯಲ್ಲಿ ಆಸ್ಪತ್ರೆ ತೆರೆದು ಇಂತಹ ಶಸ್ತ್ರಚಿಕಿತ್ಸೆ ಇಲ್ಲಿಯೇ ದೊರೆಯುವಂತೆ ಮಾಡಿದ ಪೂಜ್ಯಡಾ| ಡಿ. ವೀರೇಂದ್ರಹೆಗ್ಗಡೆಯವರಿಗೆ ಧನ್ಯವಾದಗಳು- ಎ. ರಾಜರಾಮ ನಾಯಕ್






