News and Events
ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ದಂತ ಚಿಕಿತ್ಸಾ ಕೇಂದ್ರದಲ್ಲಿ ಪ್ರಥಮ ವರ್ಷದ ವರ್ಷಾಚರಣೆ
ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರ ಇಚ್ಚೆಯಂತೆ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 2022 ಜಲಾಯಿ 11ರಂದು ಮಾನ್ಯ ಹರ್ಷೇಂದ್ರ ಕುಮಾರ್ ಇವರಿಂದ ಉದ್ಘಾಟಿಸಲ್ಪಟ್ಟ ದಂತ ಚಿಕಿತ್ಸಾ ಕೇಂದ್ರ ಪ್ರಥಮ ವರ್ಷದ ವರ್ಷಾಚರಣೆ ಆಚರಿಸಿಕೊಂಡಿತು.
ಉಜಿರೆಯ ದಂತ ಚಿಕಿತ್ಸಾ ತಜ್ಞರಾದ ಡಾ| ದಯಾಕರನ್ ಮಾತನಾಡಿ ಉಜಿರೆ ಎಸ್.ಡಿ.ಎಂ ಆಸ್ಪತೆ ಉತ್ತಮ ಸೇವೆ ಮತ್ತು ಸ್ವಚ್ಚತೆಯಲ್ಲಿ ಹೆಸರುವಾಸಿಯಾಗಿದೆ ಎಂದರು.
ಉಜಿರೆ ಎಸ್.ಡಿ.ಎಂ ಆಸ್ಪತ್ರೆ ಒಂದು ಕುಟುಂಬದ ಪರಿಕಲ್ಪನೆಯಲ್ಲಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನಿರ್ದೇಶನದಲ್ಲಿ ವೈದ್ಯಕೀಯ ಸೇವೆ ನೀಡುತ್ತಿರುವುದರಿಂದ ಇಲ್ಲಿ ರೋಗಿಗಳಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ. ಎಸ್.ಡಿ.ಎಂ ಆಸ್ಪತ್ರೆಯ ದಂತ ಚಿಕಿತ್ಸಾ ಕೇಂದ್ರ ಪ್ರಥಮ ವರ್ಷದಲ್ಲಿಯೇ 3 ಸಾವಿರಕ್ಕೂ ಮಿಕ್ಕಿ ದಂತ ಚಿಕಿತ್ಸೆ ನೀಡಿದೆ ಎಂದು ಆಸ್ಪತ್ರೆಯ ನಿರ್ದೇಶಕ ಎಂ ಜನಾರ್ದನ್ ಹೇಳಿದರು.
ದಂತ ಚಿಕಿತ್ಸಾ ತಜ್ಞರಾದ ಡಾ| ಮೀರಾ ಅನುಪಮ್, ವೈದ್ಯಕೀಯ ಅಧೀಕ್ಷ ಡಾ| ದೇವೇಂದ್ರ ಕುಮಾರ್. ಪಿ, ವೈದ್ಯಾಧಿಕಾರಿ ಡಾ| ಸಾತ್ವಿಕ್ ಜೈನ್ ಮತ್ತಿರರು ಉಪಸ್ಥಿತರಿದ್ದರು. ವಿಮಾ ವಿಭಾಗದ ಜಗನ್ನಾಥ್ ನಿರೂಪಿಸಿದರು.