News and Events
ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನೂತನ ಎಂಡೋಸ್ಕೋಪಿ ವಿಭಾಗ
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 2021ರಿಂದಲೇ ಎಂಡೋಸ್ಕೋಪಿ ಸೇವೆ ಲಭ್ಯವಿದ್ದು, ರೋಗಿಗಳ ಅನುಕೂಲಕ್ಕಾಗಿ ಹಲವಾರು ಪೂರಕ ಸೌಕರ್ಯಗಳೊಂದಿಗೆ ನೂತನ ಎಂಡೋಸ್ಕೋಪಿ ವಿಭಾಗವನ್ನು ಮೇ.20 ರಂದು ಪ್ರಾರಂಭಿಸಲಾಯಿತು.
ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ನೆಲ ಮಹಡಿಯಲ್ಲಿ ಪ್ರಸ್ತುತ ಇರುವ ಹೊರರೋಗಿ ವಿಭಾಗಗಳಲ್ಲಿ ಸ್ಥಳವಕಾಶದ ಕೊರತೆ ಇರುವುದರಿಂದ ಹಾಗೂ ರೋಗಿಗಳಿಗೆ ಇನ್ನು ಶೀಘ್ರವಾಗಿ ಮತ್ತು ಅತ್ಯುತ್ತಮ ವೈದ್ಯಕೀಯ ಸೇವೆ ನೀಡುವ ಉದ್ದೇಶದಿಂದ ನೂತನವಾಗಿ ಎಂಡೋಸ್ಕೋಪಿ ವಿಭಾಗವನ್ನು ಮೊದಲ ಮಹಡಿಯಲ್ಲಿರುವ ಹೊರರೋಗಿ ವಿಭಾಗದಲ್ಲಿ ತೆರೆಯಲಾಯಿತು. ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್. ಪಿ, ಫಿಸಿಷಿಯನ್ಗಳಾದ ಡಾ| ಸಾತ್ವಿಕ್ ಜೈನ್, ಡಾ| ಯಶಸ್ವಿನಿ, ಡಾ| ಅಕ್ಷಯ್ ಉಪಸ್ಥಿತರಿದ್ದರು.

