Contact Mobile: 91 77603 97878, Land: 08256-295611/ 615/616

News and Events

ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ನರ್ಸಸ್ ಡೇ

ವೈದ್ಯರು ಆಸ್ಪತ್ರೆಯ ಮೆದುಳಿದ್ದಂತೆ, ದಾದಿಯರು ಹೃದಯವಿದ್ದಂತೆ ಎಂದು ಎಸ್.ಡಿ.ಎಮ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ| ರಂಜನ್ ಕುಮಾರ್ ಹೇಳಿದರು. ಅವರು ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆ ಪ್ರಯುಕ್ತ ಆಸ್ಪತ್ರೆಯ ದಾದಿಯರನ್ನು ಶುಭಾಶಯ ಕೋರಿ ಮಾತನಾಡುತ್ತಾ, ವೈದ್ಯ ರೋಗಿಯನ್ನು ಪರೀಕ್ಷಿಸಿ ಚಿಕಿತ್ಸೆ ನೀಡಿದರೆ, ದಾದಿಯರು ಪ್ರತಿಕ್ಷಣ ರೋಗಿಯ ಆರೈಕೆಯಲ್ಲಿ ತಮ್ಮನ್ನು ಸಮರ್ಪಿಸಿಕೊಳ್ಳುವುದರಿಂದ ರೋಗಿಯ ಆರೋಗ್ಯ ಚೇತರಿಕೆಯಲ್ಲಿ ದಾದಿಯರ ಸೇವೆ ಬಲು ಪ್ರಾಮುಖ್ಯತೆಯನ್ನು ಪಡೆಯುತ್ತದೆ ಎಂದರು.
ನರ್ಸಿಂಗ್ ಅಧೀಕ್ಷಕಿ ಶ್ರೀಮತಿ ಶೆರ್ಲಿ ಮಾತನಾಡಿ ರೋಗಿಗಳ ಪಾಲಿಗೆ ದಾದಿಯರು ತಾಯಿ ಇದ್ದಂತೆ. ದಾದಿಯರಲ್ಲಿ ಮಾತೃಪ್ರೇಮವಿದ್ದಾಗ ಮಾತ್ರ ತನ್ನ ಉದ್ಯೋಗವನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಗುತ್ತದೆ. ಕೊರೊನಾದಂತ ಗಂಭಿರ ಸಾಂಕ್ರಾಮಿಕ ರೋಗ ವಿಶ್ವದಲ್ಲಿ ಹರಡಿರುವ ಸಂದರ್ಭದಲ್ಲಿಯೂ ರೋಗಿಗಳ ಸೇವೆಯನ್ನು ನಿರ್ಭೀತಿಯಿಂದ ನಿಭಾಯಿಸುತ್ತಿರುವ ಎಲ್ಲಾ ದಾದಿಯರು ಆರೋಗ್ಯವಂತರಾಗಿರಲಿ ಎಂದು ಹಾರೈಸಿದರು.
ಎಸ್.ಡಿ.ಎಂ ಮೆಡಿಕಲ್ ಟ್ರಸ್ಟ್ ಕಾರ್ಯದರ್ಶಿ ಶಿಶುಪಾಲ ಪೂವಣಿ, ಹಿರಿಯ ವೈದ್ಯರಾದ ಡಾ| ಬಾಲಕೃಷ್ಣ ಭಟ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಮತಿ ಸಂಗೀತಾ. ಪಿ ಕಾರ್ಯಕ್ರಮ ನಿರೂಪಿಸಿದರು. ಆಸ್ಪತ್ರೆಯ ವೈದ್ಯವೃಂದದವರು, ದಾದಿಯರು ಹಾಗೂ ಎಲ್ಲಾ ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ: ನಾರಾಯಣ. ಬಿ

News and Events

Related News