News and Events
ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ದಿನಾಂಕ 25/03/2022 ಸೋಮವಾರದಿಂದ ಶುಕ್ರವಾರದವರೆಗೆ 5.00 ರಿಂದ 7 ಗಂಟೆಯವರೆಗೆ ಸಂಜೆ ಕ್ಲಿನಿಕ್ ಉದ್ಘಾಟನೆಗೊಂಡಿತು
ಆಸ್ಪತ್ರೆಯ ಸಿಬ್ಬಂದಿಯಾದ ಮಮತಾ, ಅಕ್ಷತಾ ಮತ್ತು ಜಯಂತಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು.
ಎಸ್.ಡಿ.ಎಂ ಆಸ್ಪತ್ರೆಯ ನಿರ್ದೇಶಕರಾದ ಎಂ. ಜನಾರ್ದನ್, ವೈದ್ಯಕೀಯ ಅಧೀಕ್ಷಕ ಡಾ| ರಂಜನ್ ಕುಮಾರ್, ಡಾ| ಸಾತ್ವಿಕ್ ಜೈನ್, ಡಾ| ದೇವೇಂದ್ರ ಕುಮಾರ್, ಡಾ| ಹರೀಶ್ ಬಿ ಎಸ್, ಡಾ| ಯಶಸ್ವಿನಿ ಮೋಹನ ಅಮೀನ್, ಡಾ| ಆಶಿಕ ಪಡಿವಾಳ, ಡಾ| ಉಷಾ ಜೆ ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಶುಭಕೋರಿದರು.
ಇನ್ಶೂರೆನ್ಸ್ ವಿಭಾಗದ ಸಿಬ್ಬಂದಿಯಾದ ಜಗನ್ನಾಥ ಕಾರ್ಯಕ್ರಮವನ್ನು ನಿರೂಪಿಸಿದರು.