News and Events
ಉಜಿರೆಯ ಎಸ್ಡಿಎಂ ಆಸ್ಪತ್ರೆಯಲ್ಲಿ ಪ್ರಥಮಚಿಕಿತ್ಸೆ ತಿಳುವಳಿಕೆಯ ಮಾಹಿತಿ
ಉಜಿರೆ:ಪ್ರತಿಯೊಬ್ಬರಿಗೂ ಪ್ರಥಮಚಿಕಿತ್ಸೆ ಹಾಗೂ ತುರ್ತುಚಿಕಿತ್ಸೆ ಬಗ್ಗೆ ಪ್ರಾಥಮಿಕ ತಿಳಿವಳಿಕೆ ಇದ್ದಲ್ಲಿ ಹೆಚ್ಚಿನ ಅಪಾಯದಿಂದ ಪಾರಾಗಿ, ಆರೋಗ್ಯವನ್ನು ಕಾಪಾಡಬಹುದು ಎಂದು ಬೆಳ್ತಂಗಡಿ ರೋಟರಿ ಕ್ಲಬ್ಅಧ್ಯಕ್ಷ ಕೃಷ್ಣ ಶರತ್ಪಡ್ವೆಟ್ನಾಯ ಹೇಳಿದರು. ಉಜಿರೆಯ ಎಸ್ಡಿಎಂ ಆಸ್ಪತ್ರೆಯಲ್ಲಿ ಮುಂಡಾಜೆ ರೋಟರಿ ಸಮುದಾಯ ದಳ ಹಾಗೂ ಬೆಳ್ತಂಗಡಿ ರೋಟರಿ ಕ್ಲಬ್ಆಶ್ರಯದಲ್ಲಿ ಆಯೋಜಿಸಿದ್ದ ಪ್ರಥಮಚಿಕಿತ್ಸೆ ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾII.ರಂಜನ್ ಕುಮಾರ್ ಪ್ರಥಮ ಚಿಕಿತ್ಸೆಯ ವಿವಿಧ ಮಜಲುಗಳನ್ನು ವಿವರಿಸಿದರು. ಆಸ್ಪತ್ರೆಯ ನಿರ್ದೇಶಕ ಜನಾರ್ಧನ್ಎಂ, ರೋಟರಿ ಸಮುದಾಯದಳದ ಅಧ್ಯಕ್ಷ ಪಿಸಿಸೆಬಾಸ್ಟಿಯನ್ಉಪಸ್ಥಿತರಿದ್ದರು. ಡಾII.ಯಶಸ್ವಿಮೌನಮ್ಅಮೀನ್, ಡಾII.ತೇಜಸ್ವಿನಿ, ಡಾII. ಚಿನ್ಮಯ, ನರ್ಸಿಂಗ್ ಅಧೀಕ್ಷಕಿ ಶೆರ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು. ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸಂಗೀತಕಾರ್ಯಕ್ರಮ ನಿರೂಪಿಸಿದರು.






