News and Events
ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉತ್ತಮ ಆರೋಗ್ಯಕ್ಕಾಗಿ ಭೌತಿಕ ಅಭ್ಯಾಸಗಳ ತರಬೇತಿ
ಉಜಿರೆ ಎಸ್,ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಇಲ್ಲಿನ ಫಿಸಿಯೋಥೆರಪಿ ವಿಭಾಗದ ತಜ್ಞರಿಂದ, ಕುಳಿತು ಕೆಲಸ ಮಾಡುವವರು ಅನುಸರಿಸಬೇಕಾದ ಕೆಲವು ಭೌತಿಕ ಅಭ್ಯಾಸಗಳ ತರಬೇತಿಯನ್ನು ನೀಡಲಾಯಿತು.
ಕುಳಿತುಕೊಳ್ಳುವ ಸರಿಯಾದ ಭಂಗಿ, ಒತ್ತಡ ನಿವಾರಿಸಲು ಅನುಸರಿಸಬೇಕಾದ ನಿಯಮಗಳು ಮತ್ತು ಪ್ರತಿದಿನ ಮಾಡಬೇಕಾದ ಕೆಲವು ಭೌತಿಕ ಅಭ್ಯಾಸಗಳ ತರಬೇತಿಯನ್ನು ನೀಡಲಾಯಿತು. ಫಿಸಿಯೋಥೆರಪಿ ವಿಭಾಗದ ಇನ್-ಚಾರ್ಜ್ ರಿಯಾ ಮೋಲ್, ಹಾಗೂ ಫಿಸಿಯೋಥೆರಪಿಸ್ಟ್ ಸಿಂಚನಾ ಉಪಯುಕ್ತ ಮಾಹಿತಿಗಳೊಂದಿಗೆ ತರಬೇತಿ ನಡೆಸಿಕೊಟ್ಟರು.



